ನವದೆಹಲಿ:ಈ ತಿಂಗಳಾಂತ್ಯದಲ್ಲಿ ನಡೆಯಬೇಕಿರುವ ಬೆಲ್ಡ್ ಆ್ಯಂಡ್ ರೋಡ್ ಫೋರಂ( ಬಿಆರ್ಐ) ಸಭೆ ಹಿನ್ನೆಲೆಯಲ್ಲಿ ಚೀನಾ ಎರಡನೇ ಬಾರಿ ಭಾರತಕ್ಕೆ ಆಹ್ವಾನ ನೀಡಿದೆ. ಆದರೆ, ಡ್ರ್ಯಾಗನ್ ರಾಷ್ಟ್ರ ನೀಡಿದ ಆಹ್ವಾನವನ್ನ ಭಾರತ ಮತ್ತೊಮ್ಮೆ ತಿರಸ್ಕರಿಸಿದೆ.
ಬೀಜಿಂಗ್ 2017 ರಲ್ಲಿ ಕರೆದಿದ್ದ ಬಿಆರ್ಐ ಸಭೆಯನ್ನ ಭಾರತ ಬಹಿಷ್ಕರಿಸಿತ್ತು. ವಿವಾದಿತ ಗಿಲ್ಗಿಟ್ - ಬಾಲ್ಟಿಸ್ತಾನ ಪ್ರಾಂತ್ಯದಲ್ಲಿ ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ ಹಾದು ಹೋಗುವುದನ್ನ ಭಾರತ ವಿರೋಧಿಸಿತ್ತು. ಈ ಹಿನ್ನೆಲೆಯಲ್ಲಿಯೇ 2017 ರ ಬಿಆರ್ಐ ಸಭೆಯನ್ನ ಚೀನಾ ತಿರಸ್ಕರಿತ್ತು.