ನವದೆಹಲಿ:ಚೀನಾದ ವುಹಾಂಗ್ನಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಾಗಿನಿಂದ ಇವತ್ತಿನವರೆಗೂ ಆತಂಕ ದಿನೆದಿನೇ ಹೆಚ್ಚಾಗುತ್ತಲೇ ಇದೆ.
ಇಟಲಿ (16,523 ಮಂದಿ ಮೃತರು), ಸ್ಪೇನ್ (13,169), ಫ್ರಾನ್ಸ್ (8,078), ಯುಕೆ (5,373), ಇರಾನ್ (3,739), ಚೀನಾ (3,212), ನ್ಯೂಯಾರ್ಕ್ ಸಿಟಿ (3,048), ನೆದರ್ಲೆಂಡ್ (1,867), ಬೆಲ್ಜಿಯಂ (1,632), ಜರ್ಮನ್ (1,612) ದೇಶಗಳು ಕಣ್ಣಿಗೆ ಕಾಣದ ವೈರಸ್ಗೆ ತತ್ತರಿಸಿ ಹೋಗಿವೆ. ಈ ದೇಶಗಳಲ್ಲಿ ದಿನೆದಿನೇ ಸಾವಿನ ಸಂಖ್ಯೆ ಏರುತ್ತಲೇ ಇದೆ.
ಅಂದಿನಿಂದ ಏಪ್ರಿಲ್ 6ರವರೆಗೂ ಮಹಾಮಾರಿ ಕೊರೊನಾ ಸೋಂಕಿಗೆ ಮೃತಪಟ್ಟವರು, ಪೀಡಿತರು ಮತ್ತು ಗುಣಮುಖರಾದವರ ಸಂಖ್ಯೆ ಕ್ರಮವಾಗಿ 72,638, 13,09,439 ಮತ್ತು 2,73,546 ಆಗಿದೆ.
ದೇಶದ ಪರಿಸ್ಥಿತಿ ಹೀಗಿದೆ?
ಭಾರತದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ನಿಮಿಷದಿಂದ ಈವರೆಗೂ ಸೋಂಕಿತರ ಸಂಖ್ಯೆ 4,281ಕ್ಕೆ ಏರಿದೆ. ಅದರಲ್ಲಿ 318 ಮಂದಿ ಡಿಸ್ಚಾರ್ಜ್ ಮತ್ತು 111 ಮಂದಿ ಬಲಿಯಾಗಿದ್ದಾರೆ.
ಒಟ್ಟು ಪ್ರಕರಣಗಳಲ್ಲಿ ಡಿಸ್ಚಾರ್ಜ್ ಆದವರು ಮತ್ತು ಮೃತರನ್ನು ಹೊರತುಪಡಿಸಿದರೆ 3,851 ಪ್ರಕರಣಗಳು ಬಾಕಿ ಇವೆ. ಇನ್ನು ಕರ್ನಾಟಕದಲ್ಲಿ ಪೀಡಿತರ ಸಂಖ್ಯೆ 151ಕ್ಕೆ ಏರಿದೆ. ಅದರಲ್ಲಿ 12 ಡಿಸ್ಚಾರ್ಜ್ ಮತ್ತು 4 ಮಂದಿ ಸತ್ತಿದ್ದಾರೆ.