ಕರ್ನಾಟಕ

karnataka

ETV Bharat / bharat

ಭಾರತ-ಚೀನಾ ಗಡಿ ವಿವಾದ: ಬ್ರಿಗೇಡ್ ಕಮಾಂಡರ್ ಮಟ್ಟದ ಸಭೆ - ಪಾಂಗೊಂಗ್ ಸರೋವರ

ಪಾಂಗೊಂಗ್ ಸರೋವರದ ದಕ್ಷಿಣ ದಂಡೆಯಲ್ಲಿನ ಪರಿಸ್ಥಿತಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಲು ಭಾರತೀಯ ಸೇನೆಯ ಬ್ರಿಗೇಡ್ ಕಮಾಂಡರ್ ಚೀನಾದ ಸಹವರ್ತಿಯೊಂದಿಗೆ ಚುಶುಲ್ ಮೊಲ್ಡೊದಲ್ಲಿ ಸಭೆ ನಡೆಸುತ್ತಿದ್ದಾರೆ.

ಭಾರತ-ಚೀನಾ ಗಡಿ ವಿವಾದ
ಭಾರತ-ಚೀನಾ ಗಡಿ ವಿವಾದ

By

Published : Sep 1, 2020, 11:56 AM IST

ನವದೆಹಲಿ:ಪಾಂಗೊಂಗ್ ಸರೋವರದ ದಕ್ಷಿಣ ದಂಡೆಯಲ್ಲಿನ ಪರಿಸ್ಥಿತಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಲು ಭಾರತೀಯ ಸೇನೆಯ ಬ್ರಿಗೇಡ್ ಕಮಾಂಡರ್ ಚೀನಾದ ಸಹವರ್ತಿಯೊಂದಿಗೆ ಚುಶುಲ್ ಮೊಲ್ಡೊದಲ್ಲಿ ಸಭೆ ನಡೆಸುತ್ತಿದ್ದಾರೆ ಎಂದು ಭಾರತೀಯ ಸೇನಾ ಮೂಲಗಳು ತಿಳಿಸಿವೆ.

ಶನಿವಾರ ಮತ್ತು ಭಾನುವಾರ ಮಧ್ಯರಾತ್ರಿ ಲಡಾಖ್‌ನ ಚುಶುಲ್ ಬಳಿಯ ದಕ್ಷಿಣ ದಂಡೆಯ ಪಾಂಗೊಂಗ್ ತ್ಸೊ ಬಳಿ ಚೀನಾ ಸೇನೆಯು ಭಾರತೀಯ ಪ್ರದೇಶಗಳಿಗೆ ಅತಿಕ್ರಮಣ ಮಾಡುವ ಪ್ರಯತ್ನವನ್ನು ಭಾರತದ ಸೇನೆ ವಿಫಲಗೊಳಿಸಿದ ನಂತರ ಈ ಸಭೆ ನಡೆಸಲಾಗುತ್ತಿದೆ.

"ಆಗಸ್ಟ್ 29 ಮತ್ತು 30ರ ರಾತ್ರಿ, ಪೂರ್ವ ಲಡಾಖ್​ನಲ್ಲಿ ನಡೆಸಿರುವ ಮಿಲಿಟರಿ ಮತ್ತು ರಾಜತಾಂತ್ರಿಕ ಮಾತುಕತೆಯ ಹಿಂದಿನ ಒಪ್ಪಂದವನ್ನು ಪಿಎಲ್‌ಎ ಪಡೆಗಳು ಉಲ್ಲಂಘಿಸಿವೆ" ಎಂದು ಸೇನೆಯ ವಕ್ತಾರ ಕರ್ನಲ್ ಅಮನ್ ಆನಂದ್ ಹೇಳಿದ್ದಾರೆ.

ಭಾರತೀಯ ಸೇನೆಯು ತನ್ನ ಸ್ಥಾನವನ್ನು ಬಲಪಡಿಸಲು ಮತ್ತು ನೆಲದ ಮೇಲೆ ಏಕಪಕ್ಷೀಯವಾಗಿ ಸತ್ಯವನ್ನು ಬದಲಾಯಿಸುವ ಚೀನಾದ ಉದ್ದೇಶಗಳನ್ನು ತಡೆಯಲು ಕ್ರಮಗಳನ್ನು ತೆಗೆದುಕೊಂಡಿದೆ.

"ಭಾರತೀಯ ಸೈನ್ಯವು ಮಾತುಕತೆ ಮೂಲಕ ಶಾಂತಿ ಕಾಪಾಡಿಕೊಳ್ಳಲು ಬದ್ಧವಾಗಿದೆ. ಆದರೆ ಅದರ ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡಲು ಸಹ ಅಷ್ಟೇ ನಿರ್ಧರಿಸಿದೆ. ಸಮಸ್ಯೆಗಳನ್ನು ಪರಿಹರಿಸಲು ಚುಶುಲ್‌ನಲ್ಲಿ ಬ್ರಿಗೇಡ್ ಕಮಾಂಡರ್ ಮಟ್ಟದ ಸಭೆ ಪ್ರಗತಿಯಲ್ಲಿದೆ" ಎಂದು ಆನಂದ್ ಹೇಳಿದರು.

ಚೀನಾದ ಸೈನ್ಯವು ಗಣನೀಯ ಸಂಖ್ಯೆಯ ಸೈನಿಕರನ್ನು ಬಳಸಿಕೊಂಡು ಭಾರತೀಯ ಪ್ರದೇಶಗಳಿಗೆ ಅತಿಕ್ರಮಿಸಲು ಪ್ರಯತ್ನಿಸಿದೆ ಎಂದು ಸೇನಾ ಮೂಲಗಳು ತಿಳಿಸಿವೆ. ಫಿಂಗರ್ ಪ್ರದೇಶ, ಗಾಲ್ವಾನ್ ಕಣಿವೆ, ಹಾಟ್ ಸ್ಪ್ರಿಂಗ್ಸ್ ಮತ್ತು ಕೊಂಗ್ರಂಗ್ ನಲಾ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಚೀನಾ ಸೈನ್ಯವು ಮಾಡಿದ ಉಲ್ಲಂಘನೆಗಳಿಂದ ಭಾರತ ಮತ್ತು ಚೀನಾ ಏಪ್ರಿಲ್-ಮೇ ತಿಂಗಳಿನಿಂದ ಭಿನ್ನಾಭಿಪ್ರಾಯದಲ್ಲಿ ತೊಡಗಿವೆ.

ಗಡಿ ವಿವಾದವನ್ನು ಬಗೆಹರಿಸುವ ಪ್ರಯತ್ನಗಳು ನಡೆಯುತ್ತಿರುವಾಗ, ಪೂರ್ವ ಲಡಾಕ್‌ನ ಫಿಂಗರ್ ಪ್ರದೇಶದಿಂದ ಸಮನಾಗಿ ಬೇರ್ಪಡಿಸುವ ಚೀನಾದ ಸಲಹೆಯನ್ನು ಭಾರತ ತಿರಸ್ಕರಿಸಿದೆ.

ABOUT THE AUTHOR

...view details