ತಿರುವನಂತಪುರಂ (ಕೇರಳ): ಮಾಸ್ಕ್ ಧರಿಸದೆ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಿದ್ರೆ ದಂಡ ಬೀಳೋದು ಗ್ಯಾರೆಂಟಿ. ಆದರೆ ಕೇರಳದ ರಾಹುಲ್ ಗಾಂಧಿ ಪ್ರತಿನಿಧಿಸುವ ಲೋಕಸಭಾ ಕ್ಷೇತ್ರ ವೈನಾಡುವಿನ ಅಂಗಡಿಗಳಲ್ಲಿ ಸೋಪ್ ಹಾಗೂ ಸ್ಯಾನಿಟೈಸರ್ ಇಲ್ಲದೇ ಇದ್ದರೆ ದಂಡ ಹಾಕುವುದಾಗಿ ಅಲ್ಲಿನ ಎಸ್ಪಿ ಆರ್.ಇಳಂಗೋ ಎಚ್ಚರಿಕೆ ನೀಡಿದ್ದಾರೆ.
ಇಲ್ಲಿನ ಅಂಗಡಿಗಳಲ್ಲಿ ಸ್ಯಾನಿಟೈಸರ್, ಸೋಪ್ ಇಲ್ಲಾ ಅಂದ್ರೆ ದಂಡವೇ ಔಷಧ!
ಕೇರಳದ ವೈನಾಡು ಜಿಲ್ಲೆಯಲ್ಲಿ ಮಾಸ್ಕ್ ಧರಿಸದೆ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಿದ್ರೆ 5 ಸಾವಿರ ರೂಪಾಯಿ ದಂಡ ಹಾಗೂ ಅಂಗಡಿಗಳಲ್ಲಿ ಸ್ಯಾನಿಟೈಸರ್ ಹಾಗೂ ಮಾಸ್ಕ್ ಇಲ್ಲದೇ ಇದ್ದರೆ ಸಾವಿರ ರೂಪಾಯಿ ದಂಡ ಹಾಕೋದಾಗಿ ಅಲ್ಲಿನ ಜಿಲ್ಲಾಡಳಿತ ಎಚ್ಚರಿಸಿದೆ.
ಮಾಸ್ಕ್ ಧರಿಸಿದೇ ಇದ್ದರೆ 5 ಸಾವಿರ ರೂಪಾಯಿ ಹಾಗೂ ಅಂಗಡಿಗಳಲ್ಲಿ ಸೋಪು, ಸ್ಯಾನಿಟೈಸರ್ ಇಡದೇ ಇದ್ದರೆ ಒಂದು ಸಾವಿರ ರೂಪಾಯಿ ದಂಡ ಹಾಕಲಾಗುತ್ತದೆ ಎಂದು ಜಿಲ್ಲಾಡಳಿತ ಕಟ್ಟುನಿಟ್ಟಾಗಿ ಸೂಚಿಸಿದೆ.
ಈಗ ವೈನಾಡು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರಿಲ್ಲದ ಕಾರಣ 'ಹಸಿರು ವಲಯ' ಎಂದು ಘೋಷಣೆ ಮಾಡಲಾಗಿದೆ. ಸುಮಾರು 842 ಮಂದಿಯನ್ನು ಅವರವರ ಮನೆಗಳಲ್ಲಿ ಹಾಗೂ 9 ಮಂದಿಯನ್ನು ಆಸ್ಪತ್ರೆಗಳಲ್ಲಿರಿಸಿ ವಿಶೇಷ ನಿಗಾ ವಹಿಸಲಾಗುತ್ತಿದೆ. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ಮಾಸ್ಕ್ ಧರಿಸುವಂತೆ ಹಾಗೂ ಅಂಗಡಿಗಳಲ್ಲಿ ಸ್ಯಾನಿಟೈಸರ್ ಹಾಗೂ ಸೋಪುಗಳ ಕೊರತೆಯಾಗದಂತೆ ನೋಡಿಕೊಳ್ಳಲು ಮುನ್ನೆಚ್ಚರಿಕೆ ವಹಿಸಿದೆ.