ಕರ್ನಾಟಕ

karnataka

ETV Bharat / bharat

ವಿಶ್ವಸಂಸ್ಥೆ ಭದ್ರತಾ ಮಂಡಳಿಯಿಂದ ಇದೇ ಮೊದಲು ವಿಡಿಯೋ ಕಾನ್ಫರೆನ್ಸ್​ ಮೂಲಕ  ನಿರ್ಣಯ ಅಂಗೀಕಾರ! - corona effect

ಕೋವಿಡ್​-19 ವಿಶ್ವದಾದ್ಯಂತ ತುಂಬಾ ವೇಗವಾಗಿ ಹಬ್ಬುತ್ತಿದೆ. ಇದೇ ಕಾರಣದಿಂದ ವಿಶ್ವಸಂರ್ಸತೆಯೂ ಕೂಡಾ ಕೆಲವೊಂದು ಹೊಸ ನಿರ್ಣಯಗಳನ್ನು ಜಾರಿಗೊಳಿಸಿದೆ. ಇದೇ ಮೊದಲ ಬಾರಿಗೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಕೆಲವೊಂದು ನಿರ್ಣಯಗಳನ್ನು ತೆಗೆದುಕೊಂಡಿದೆ.

UN Security Council
ವಿಶ್ವಸಂಸ್ಥೆಯ ಭದ್ರತಾ ಮಂಡಳಿ

By

Published : Mar 31, 2020, 8:39 AM IST

ನ್ಯೂಯಾರ್ಕ್​:ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕೆಲವೊಂದು ನಿರ್ಣಯಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ​ ಅಂಗೀಕರಿಸಿದೆ.

ಈವರೆಗೆ ಉತ್ತರ ಕೊರಿಯಾ ಮೇಲೆ ವಿಧಿಸಿರುವ ನಿರ್ಬಂಧಗಳ ಮೇಲ್ವಿಚಾರಣೆ ನಡೆಸುತ್ತಿರುವ ವಿಶ್ವಸಂಸ್ಥೆಯ ತಜ್ಞರ ಅವಧಿಯನ್ನು ಏಪ್ರಿಲ್​ 2021ಕ್ಕೆ ವಿಸ್ತರಣೆ ಮಾಡುವುದು ಸೇರಿದಂತೆ ಹಲವಾರು ನಿರ್ಣಯಗಳನ್ನು ಈ ವೇಳೆ ಕೈಗೊಳ್ಳಲಾಯಿತು. ಸೋಮಾಲಿಯಾದಲ್ಲಿ ಜೂನ್​ ಅಂತ್ಯದವರೆಗೆ ಹಾಗೂ ಆಫ್ರಿಕಾದ ಡಾರ್ಫರ್​ನಲ್ಲಿ ಮೇ ಅಂತ್ಯದವರೆಗೆ ನಡೆಯಲಿರುವ ವಿಶ್ವಸಂಸ್ಥೆಯ ಕಾರ್ಯಾಚರಣೆಗಳ ಬಗ್ಗೆಯೂ ಕೂಡಾ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.

ಈ ನಿರ್ಣಯಗಳನ್ನು ತೆಗೆದುಕೊಳ್ಳಲು ಮಾರ್ಚ್​ 12ರಿಂದ ವಿಡಿಯೋ ಕಾನ್ಫರೆನ್ಸ್​ ಮೂಲಕ ಸಭೆಗಳನ್ನು ನಡೆಸಲಾಗಿತ್ತು. ಅಮೆರಿಕದ ನ್ಯೂಯಾರ್ಕ್​​ನಲ್ಲಿ ಕೊರೊನಾ ಹಾವಳಿ ಸೃಷ್ಟಿಸಿರುವ ಕಾರಣದಿಂದಾಗಿ ವಿಡಿಯೋ ಕಾನ್ಫರೆನ್ಸ್​ ಸಭೆಗಳ ಮೂಲಕ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ಕೋವಿಡ್​ ಹರಡುವ ಭೀತಿಯಲ್ಲಿ ವಿಡಿಯೋ ಚರ್ಚೆಗಳು ಅತಿ ಮುಖ್ಯ ಎಂಬುದನ್ನು ಅರಿತ ವಿಶ್ವಸಂಸ್ಥೆ ಸುಮಾರು 75 ವರ್ಷಗಳ ನಂತರ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಭದ್ರತಾ ಮಂಡಳಿಯ ಸದಸ್ಯರೂ ಕೂಡಾ ಈ ಚರ್ಚೆಗಳಲ್ಲಿ ಪಾಲ್ಗೊಳ್ಳಲು ಹಾಗೂ ಪೂರ್ಣ ಸಹಕಾರ ನೀಡಲು ಒಪ್ಪಿಕೊಂಡಿದ್ದರು. ಹಾಗೆಯೇ ತಮ್ಮ ಮತಗಳನ್ನು ಆನ್​ಲೈನ್​ನಲ್ಲಿ ಚಲಾಯಿಸಲು ಅನುಮತಿ ಅನುಮತಿ ನೀಡಿದ್ದರು.

ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳು ವಿಡಿಯೋ ಕಾನ್ಫರೆನ್ಸ್​ಗೆ ಒಪ್ಪಿಗೆ ನೀಡಿದ್ದರೂ ಕೂಡಾ ರಷ್ಯಾ ಇದಕ್ಕೆ ಒಪ್ಪಿರಲಿಲ್ಲ. ತನ್ನ ವಿಟೋ ಅಧಿಕಾರವನ್ನು ಉಪಯೋಗಿಸಿಕೊಂಡು ಕಾನೂನಾತ್ಮಕವಾಗಿ ಹಾಗೂ ರಾಜಕೀಯ ನೆಲೆಯಲ್ಲಿ ಈ ಹೊಸ ನೀತಿಯನ್ನು ವಿರೋಧಿಸಿತ್ತು. ಕೇವಲ ಔಪಚಾರಿಕ ಮಾತುಕತೆಗೆ ಮಾತ್ರ ರಷ್ಯಾ ಮೊದಲಿಗೆ ಅವಕಾಶ ನೀಡಿತ್ತು. ವಿವಾದಾತ್ಮಕ ವಿಚಾರಗಳಲ್ಲಿ ಈ ರೀತಿಯ ವಿಡಿಯೋ ಕಾನ್ಫರೆನ್ಸ್​ ಅಷ್ಟೇನೂ ಅನುಕೂಲಕ್ಕೆ ಬರೋದಿಲ್ಲ ಎಂಬುದು ಅದರ ವಾದವಾಗಿತ್ತು. ಈಗ ಸದ್ಯಕ್ಕೆ ಕೆಲವು ವಿವಾದಾತ್ಮಕ ವಿಚಾರಗಳಲ್ಲದ ಸಮಸ್ಯೆಗಳ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಗಿದೆ.

ABOUT THE AUTHOR

...view details