ಕರ್ನಾಟಕ

karnataka

ETV Bharat / bharat

ಇದೇ ಮೊದಲು: ರೈಲಿನ ಮೂಲಕ ಬಾಂಗ್ಲಾಗೆ 466 ಟನ್‌ ಗುಂಟೂರು ಮೆಣಸು ರವಾನೆ

ಭಾರತೀಯ ರೈಲ್ವೆಯ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ವಿಶೇಷ ಪಾರ್ಸಲ್ ಎಕ್ಸ್‌ಪ್ರೆಸ್ ರೈಲುಗಳ ಮೂಲಕ ಬಾಂಗ್ಲಾದೇಶಕ್ಕೆ ಗುಂಟೂರು ಕೆಂಪುಮೆಣಸು ರಫ್ತಾಗಿದೆ. ಈ ಒಣ ಕೆಂಪುಮೆಣಸು ಆಂಧ್ರದ ಗುಂಟೂರಿನ ರೆಡ್ಡಿಪಾಳಯಂನಿಂದ ರವಾನೆಯಾಗಿದೆ. ಗುಂಟೂರು ಮತ್ತು ಅದರ ಸುತ್ತಮುತ್ತಲ ಪ್ರದೇಶಗಳು ಕೆಂಪು ಮೆಣಸು ಕೃಷಿಗೆ ಚಿರಪರಿಚಿತವಾಗಿವೆ.

ಗುಂಟೂರು ಮೆಣಸು
ಗುಂಟೂರು ಮೆಣಸು

By

Published : Jul 13, 2020, 12:44 AM IST

ನವದೆಹಲಿ: ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ರೈಲು ಅಂತಾರಾಷ್ಟ್ರೀಯ ಗಡಿದಾಟಿ ಅವಶ್ಯಕ ಸಾಮಗ್ರಿಯನ್ನು ಬಾಂಗ್ಲಾದೇಶಕ್ಕೆ ಕಳುಹಿಸಿಕೊಟ್ಟಿದೆ. ಆಂಧ್ರದ ಗುಂಟೂರಿನಿಂದ ಒಣ ಕೆಂಪುಮೆಣಸು ಹೊತ್ತ ವಿಶೇಷ ಪಾರ್ಸಲ್ ರೈಲು ಆಂಧ್ರದಿಂದ ಬಾಂಗ್ಲಾದೇಶ ತಲುಪಿ ಮೈಲಿಗಲ್ಲು ಸೃಷ್ಟಿಸಿತು. ಒಟ್ಟು 16 ವಿಶೇಷ ಪಾರ್ಸಲ್ ವ್ಯಾನ್‌ಗಳನ್ನು ಹೊಂದಿದ್ದ ರೈಲು ಬಾಂಗ್ಲಾದ ಬೆನಪೋಲ್ ತಲುಪಿದೆ.

ರೈಲಿನಲ್ಲಿರುವ ಪ್ರತಿ ಪಾರ್ಸೆಲ್‌ ವ್ಯಾನ್‌ಗಳು 466 ಒಣ ಕೆಂಪುಮೆಣಸುಗಳ ಬ್ಯಾಗುಗಳನ್ನು ಹೊಂದಿತ್ತು. ಪ್ರತಿ ವ್ಯಾನುಗಳಲ್ಲಿ ತಲಾ 19.9 ಟನ್ನುಗಳಷ್ಟು ಮೆಣಸು ಇತ್ತು. ಈ ಮೂಲಕ ವಿಶೇಷ ರೈಲು ಅಂದಾಜು 384 ಟನ್ನುಗಳಷ್ಟು ಕೆಂಪು ಮೆಣಸನ್ನು ಬಾಂಗ್ಲಾದೇಶಕ್ಕೆ ಕೊಂಡೊಯ್ದಿದೆ.

ಈ ವಿಶೇಷ ರೈಲಿನ ಮೂಲಕ ಪ್ರತಿ ಟನ್ನು ಮೆಣಸಿನ ಸರಬರಾಜು ಬೆಲೆ 4,608 ರೂಪಾಯಿಗಳಾಗಿವೆ. ರಸ್ತೆ ಸಂಚಾರದಲ್ಲಾಗಿದ್ದರೆ ಪ್ರತಿ ಟನ್ನುಗಳಿಗೆ ಸುಮಾರು 7,000 ರೂಪಾಯಿ ತಗುಲುತಿತ್ತು ಎಂದು ಭಾರತೀಯ ರೈಲ್ವೇ ಅಂದಾಜು ಮಾಡಿದೆ.

ಆಂಧ್ರದ ಗುಂಟೂರು ಮತ್ತು ಅದರ ಸುತ್ತಮುತ್ತಲ ಪ್ರದೇಶಗಳು ಮೆಣಸು ಉತ್ಪಾದನೆಗೆ ಭಾರಿ ಜನಪ್ರಿಯತೆ ಪಡೆದಿದೆ. ಇಲ್ಲಿ ಬೆಳೆಯುವ ಮೆಣಸು ವಿಶೇಷ ರುಚಿ ಹೊಂದಿದ್ದು ದೇಶದಲ್ಲಿ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಮಾನ್ಯತೆ ಗಳಿಸಿದೆ. ಈ ಮುನ್ನ ಇಲ್ಲಿನ ಕೃಷಿಕರು ಮತ್ತು ವ್ಯಾಪಾರಿಗಳು ರಸ್ತೆ ಸಂಚಾರದ ಮೂಲದ ಸಣ್ಣ ಪ್ರಮಾಣದಲ್ಲಿ ಬಾಂಗ್ಲಾದೇಶಕ್ಕೆ ಮೆಣಸು ರಫ್ತು ಮಾಡುತ್ತಿದ್ದರು. ಆದ್ರೆ ಲಾಕ್ ಡೌನ್ ಸಮಯದಲ್ಲಿ ಮೆಣಸನ್ನು ರಫ್ತು ಮಾಡೋಕೆ ಸಾಧ್ಯವಾಗಿರಲಿಲ್ಲ. ಈ ಸಂದರ್ಭದಲ್ಲಿ ಅವರನ್ನು ರೈಲ್ವೇ ಅಧಿಕಾರಿಗಳು ಭೇಟಿಯಾಗಿ ಹೊಸ ಪಾರ್ಸಲ್ ರೈಲು ವ್ಯವಸ್ಥೆಯ ಬಗ್ಗೆ ತಿಳಿಸಿದ್ದಾರೆ.

ಈ ಸರಕುಗಳನ್ನು ಗೂಡ್ಸ್ ರೈಲುಗಳಲ್ಲಿ ಕೊಂಡೊಯ್ಯಲು, ರೈತರು ಮತ್ತು ವ್ಯಾಪಾರಿಗಳು ಅವುಗಳನ್ನು ಒಂದೆಡೆ ಒಟ್ಟು ಸೇರಿಸಬೇಕಿತ್ತು. ಇದು ಪ್ರತಿ ಟ್ರಿಪ್ ಗೆ ಕಡಿಮೆ ಎಂದಾದರೂ 1,500 ಟನ್ನುಗಳಷ್ಟಿರಬೇಕು. ಹಾಗಾಗಿ, ರೈತರಿಗೆ ಗರಿಷ್ಠ ಒಂದು ಟ್ರಿಪ್‌ನಲ್ಲಿ 500 ಟನ್ನುಗಳಷ್ಟು ಸರಕುಗಳನ್ನು ಸಾಗಿಸಲು ಅನುವಾಗುವಂತೆ ಗುಂಟೂರು ವಿಭಾಗದ ರೈಲ್ವೇ ಅಧಿಕಾರಿಗಳು ಬಾಂಗ್ಲಾಗೆ ವಿಶೇಷ ಪಾರ್ಸೆಲ್ ರೈಲುಗಳನ್ನು ಬಿಡಲು ರೈಲ್ವೇ ಮಂಡಳಿಯಿಂದ ಅನುಮತಿ ಪಡೆದಿದ್ದರು.

ABOUT THE AUTHOR

...view details