ನವದೆಹಲಿ:ಸದಾ ಒಂದಿಲ್ಲೊಂದು ರೀತಿಯಲ್ಲಿ ಕಾಲು ಕೆದರಿ ಭಾರತದೊಂದಿಗೆ ಜಗಳವಾಡುವ ನೆರೆಯ ದೇಶ ಪಾಕಿಸ್ತಾನ ಇದೀಗ ನೇಪಾಳದ ಹಾದಿ ಹಿಡಿದಿದೆ. ಜಮ್ಮುಕಾಶ್ಮೀರ ಹಾಗೂ ಗುಜರಾತ್ನ ಕೆಲ ಭೂಪ್ರದೇಶಗಳನ್ನು ಸೇರ್ಪಡೆ ಮಾಡಿಕೊಂಡಿರುವ ಹೊಸ ನಕ್ಷೆಯನ್ನು ಬಿಡುಗಡೆ ಮಾಡಿದೆ.
ಜಮ್ಮುಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ಧುಗೊಳಿಸಿ ಒಂದು ವರ್ಷ ಆಗಿರುವ ಬೆನ್ನಲ್ಲೇ ಪಾಕ್ ಈ ನಕ್ಷೆ ರಿಲೀಸ್ ಮಾಡಿದೆ. ಇದೇ ವಿಚಾರವಾಗಿ ಮಾತನಾಡಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಇನ್ಮುಂದೆ ಹೊಸದಾಗಿ ಪ್ರಕಟಗೊಂಡಿರುವ ನಕ್ಷೆಯ ಪ್ರಕಾರ ಶಾಲೆ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗುವುದು ಎಂದಿದ್ದಾರೆ.