ಕರ್ನಾಟಕ

karnataka

ETV Bharat / bharat

ದೊಡ್ಡಣ್ಣನ ಜೊತೆ ಕಾಶ್ಮೀರ ವಿವಾದ ಚರ್ಚಿಸಿದ ಪಾಕ್​... ಟ್ರಂಪ್​ ಜತೆ 20 ನಿಮಿಷ ಇಮ್ರಾನ್​​ ಖಾನ್​​​ ಮಾತು! - ಜಮ್ಮು-ಕಾಶ್ಮೀರ

ಜಮ್ಮು-ಕಾಶ್ಮೀರದ ವಿಚಾರವಾಗಿ ಪಾಕಿಸ್ತಾನ, ಅಮೆರಿಕದ ಮೊರೆ ಹೋಗಿದ್ದು, ಇದೇ ವಿಷಯವನ್ನಿಟ್ಟುಕೊಂಡು ಅಲ್ಲಿನ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಜತೆ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​​ ಮಾತುಕತೆ ನಡೆಸಿದ್ದಾರೆ.

ದೊಡ್ಡಣ್ಣನ ಮೊರೆ ಹೋದ ಪಾಕ್

By

Published : Aug 16, 2019, 10:26 PM IST

ನ್ಯೂಯಾರ್ಕ್​: ಜಮ್ಮು-ಕಾಶ್ಮೀರ ವಿಚಾರವಾಗಿ ಪ್ರತಿದಿನ ಪಾಕ್​​ ಕಾಲು ಕೆರೆದು ಜಗಳಕ್ಕೆ ಹೋಗುತ್ತಿದ್ದು, ಇದೀಗ ಅದೇ ವಿಷಯವನ್ನಿಟ್ಟುಕೊಂಡು ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಜತೆ ದೂರವಾಣಿ ಸಂಭಾಷಣೆ ನಡೆಸಿದ್ದಾರೆ.

ಕಣಿವೆ ರಾಜ್ಯಕ್ಕೆ ನೀಡಿರುವ ವಿಶೇಷ ಸ್ಥಾನಮಾನದ ಆರ್ಟಿಕಲ್​ 370 ರದ್ಧತಿ ವಿಷಯವನ್ನೇ ವಿಶ್ವಸಂಸ್ಥೆಯಲ್ಲಿ ಚರ್ಚೆ ನಡೆಸಲು ಪಾಕ್​ ಪತ್ರ ಬರೆದಿದ್ದು, ಇಂದು ಅದರ ಚರ್ಚೆ ಸಹ ನಡೆದಿದೆ. ಇದರ ಮಧ್ಯೆ ಪಾಕ್​ ಪ್ರಧಾನಿ ಇಮ್ರಾನ್​​ ಖಾನ್​ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಜತೆ 20 ನಿಮಿಷಗಳ ಕಾಲ ದೂರವಾಣಿ ಸಂಭಾಷಣೆ ನಡೆಸಿದ್ದಾಗಿ ತಿಳಿದು ಬಂದಿದೆ.

ಈ ವೇಳೆ ಪಾಕ್​ ವಿದೇಶಾಂಗ ಸಚಿವ ಶಾ ಮೊಹಮ್ಮದ್​ ಖುರೇಷಿ ಸಹ ಉಪಸ್ಥಿತರಿದ್ದರು ಎಂದು ತಿಳಿದು ಬಂದಿದೆ. ಇನ್ನು ವಿಶ್ವಸಂಸ್ಥೆಯಲ್ಲಿ ಇದೇ ವಿಷಯವಾಗಿ ಭದ್ರತಾ ಮಂಡಳಿಯಲ್ಲಿ ಚರ್ಚೆ ನಡೆದಿದ್ದು, ಭಾರತದ ಪರ ರಷ್ಯಾ ಬ್ಯಾಟ್​ ಬೀಸಿದೆ. ಕಾಶ್ಮೀರ ವಿಚಾರವೊಂದು ದ್ವಿಪಕ್ಷೀಯ ಸಮಸ್ಯೆಯಾಗಿದ್ದು, ಅದನ್ನ ಉಭಯ ದೇಶಗಳು ಸಭೆ ನಡೆಸಿ ಬಗೆಹರಿಸಿಕೊಳ್ಳಬೇಕು ಎಂದು ಹೇಳಿದೆ.

ABOUT THE AUTHOR

...view details