ಕೋಡರ್ಮಾ: ಮಹಿಳೆಯೊಬ್ಬಳು ತನ್ನ ಸೋದರಳಿಯನ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆಂದು ಶಂಕಿಸಿ, ಆಕೆಯನ್ನು ಮನೆಯಿಂದ ಹೊರಗೆಳೆದು, ನಗ್ನಗೊಳಿಸಿದ್ದಲ್ಲದೆ ತಲೆಗೂದಲು ಕತ್ತರಿಸಿರುವ ಅಮಾನವೀಯ ಘಟನೆ ಜಾರ್ಖಂಡ್‍ನ ಕೋಡರ್ಮಾದಲ್ಲಿ ನಡೆದಿದೆ.
ಅಳಿಯನೊಂದಿಗೆ ಅಕ್ರಮ ಸಂಬಂಧ: ಮಹಿಳೆಯನ್ನ ನಗ್ನಗೊಳಿಸಿ, ತಲೆಗೂದಲು ಬೋಳಿಸಿದ ಗ್ರಾಮಸ್ಥರು - An immoral relationship is not a criminal offense
ಸೋದರಳಿಯನ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಳೆನ್ನಲಾದ ಮಹಿಳೆಯನ್ನು ನಗ್ನಗೊಳಿಸಿ, ತಲೆಗೂದಲನ್ನು ಕತ್ತರಿಸಿರುವ ಅಮಾನವೀಯ ಘಟನೆ ಜಾರ್ಖಂಡ್‍ನ ಕೋಡರ್ಮಾದಲ್ಲಿ ನಡೆದಿದೆ.
ತನ್ನ ಸ್ವಂತ ಸೋದರಳಿಯನ ಜೊತೆ ಈಕೆ ಅನೈತಿಕ ಸಂಬಂಧ ಹೊಂದಿದ್ದಾಳೆಂದು ಡೆಂಗೋಡಿಹ್ ಗ್ರಾಮಸ್ಥರು ಆರೋಪಿಸಿದ್ದಾರೆ. ಈ ವಿಚಾರವಾಗಿ ಗ್ರಾಮದಲ್ಲಿ ಪಂಚಾಯಿತಿ ನಡೆಸಿದಾಗ, ಸೋದರಳಿಯ ಸಂದೀಪ್ ಸಾವ್ (22) ತನ್ನೊಂದಿಗಿನ ಸಂಬಂಧ ಮುಂದುವರಿಸುವಂತೆ ಬೆದರಿಕೆ ಒಡ್ಡುತ್ತಿದ್ದ ಎಂದು ಮಹಿಳೆ ದೂರಿದ್ದಳು. ಇದಕ್ಕೆ ಪ್ರತಿಯಾಗಿ ಸಂದೀಪ್ ಸಾವ್, ಆಕೆಯೇ ತನ್ನೊಂದಿಗೆ ಸಂಬಂಧ ಹೊಂದಲು ಆಮಿಷವೊಡ್ಡಿದಳು ಎಂದು ಗ್ರಾಮಸ್ಥರ ಮುಂದೆ ಹೇಳಿದ್ದ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು, ಮಹಿಳೆಯನ್ನು ಬೆತ್ತಲೆಗೊಳಿಸಿ, ತಲೆ ಕೂದಲು ಕತ್ತರಿಸಿದ್ದಾರೆ.
ಸುಪ್ರೀಂ ಕೋರ್ಟ್ ಅನೈತಿಕ ಸಂಬಂಧ ಕ್ರಿಮಿನಲ್ ಅಪರಾಧವಲ್ಲ ಎಂದು ತೀರ್ಪು ನೀಡಿದ ಬಳಿಕವೂ ಇಂತಹದ್ದೊಂದು ಅಮಾನವೀಯ ಘಟನೆ ನಡೆದಿದ್ದು ನಿಜಕ್ಕೂ ಶೋಚನೀಯ ಸಂಗತಿ.