ಕರ್ನಾಟಕ

karnataka

ETV Bharat / bharat

ಐಎಂಎನಲ್ಲಿ ಪಾಸಿಂಗ್​ ಔಟ್​ ಪೆರೇಡ್​ ; ಪ್ರೇಕ್ಷಕರಿಲ್ಲದೇ ಬಿಕೋ ಎನ್ನುತ್ತಿದ್ದ ವೀಕ್ಷಕ ಗ್ಯಾಲರಿ - ಭಾರತೀಯ ಮಿಲಿಟರಿ ಅಕಾಡೆಮಿ

ಐಎಂಎ ಇತಿಹಾಸದಲ್ಲಿ ಮೊದಲ ಬಾರಿಗೆ ಕೆಡೆಟ್​ಗಳ ಪೋಷಕರನ್ನು ಪಿಒಪಿಗೆ ಆಹ್ವಾನಿಸಿಲ್ಲ. ಅಲ್ಲದೇ ಕೊರೊನಾ ವೈರಸ್​ ಹೆಚ್ಚುತ್ತಿರುವ ಕಾರಣದಿಂದಾಗಿ ಕೆಡೆಟ್​ಗಳಿಗೆ ಕತ್ತಿ ಮತ್ತು ಪದಕಗಳನ್ನು ಮುಟ್ಟದಂತೆ ನಿಷೇಧಿಸಲಾಗಿತ್ತು.

IMA
ಪಾಸಿಂಗ್​ ಔಟ್​ ಪೆರೇಡ್

By

Published : Jun 13, 2020, 11:51 AM IST

ಡೆಹ್ರಾಡೂನ್: ಭಾರತೀಯ ಮಿಲಿಟರಿ ಅಕಾಡೆಮಿಯಲ್ಲಿ (ಐಎಂಎ) ನಡೆದ ಪಾಸಿಂಗ್ ಔಟ್ ಪರೇಡ್ (ಪಿಒಪಿ) ಕಾರ್ಯಕ್ರಮವನ್ನು ಭಾರತೀಯ ಸೇನೆಯ ಯೂಟ್ಯೂಬ್ ಚಾನೆಲ್‌ನಲ್ಲಿ ದೇಶಾದ್ಯಂತ ನೇರ ಪ್ರಸಾರ ಮಾಡಲಾಯಿತು. ಕೊರೊನಾ ಭೀತಿ ನಡುವೆಯೂ 2020ರ ಬ್ಯಾಚ್‌ನ ಪಿಒಪಿ ಕಾರ್ಯಕ್ರಮ ನಡೆಯಿತು.

ಐಎಂಎನಲ್ಲಿ ಪಾಸಿಂಗ್​ ಔಟ್​ ಪೆರೇಡ್​ ಕಾರ್ಯಕ್ರಮ

ಐಎಂಎದಲ್ಲಿ 423 ಅಧಿಕಾರಿಗಳ ಪಾಸಿಂಗ್ ಔಟ್ ಪರೇಡ್​​ ಅನ್ನು ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವಾನೆ ಪರಿಶೀಲಿಸಿದರು. ಡೆಹ್ರಾಡೂನ್‌ನ ಇಂಡಿಯನ್ ಮಿಲಿಟರಿ ಅಕಾಡೆಮಿ (ಐಎಂಎ) ಯಲ್ಲಿ ಪಾಸಿಂಗ್ ಔಟ್​ ಪರೇಡ್ ನಂತರ ಒಟ್ಟು 333 ಅಧಿಕಾರಿಗಳು ಇಂದು ಭಾರತೀಯ ಸೇನೆ ಸೇರಿದ್ದಾರೆ. ಮೆರವಣಿಗೆಯಲ್ಲಿ ಒಂಬತ್ತು ಮಿತ್ರ ದೇಶಗಳ 90 ಜಂಟಲ್‌ಮ್ಯಾನ್ ಕೆಡೆಟ್‌ಗಳು ಸೇರಿದಂತೆ 423 ಅಧಿಕಾರಿಗಳು ಭಾಗವಹಿಸಿದ್ದಾರೆ.

ಮಿತ್ರ ದೇಶಗಳ ಭಾಗಿ

ಕೋವಿಡ್​ ಕಾರಣದಿಂದಾಗಿ ಹಲವಾರು ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಆಚರಣೆಗಳು ಕಾಣೆಯಾಗುತ್ತಿದ್ದರೂ, ಸಾಂಪ್ರದಾಯಿಕ ಪಾಸಿಂಗ್ ಔಟ್ ಪರೇಡ್​ನ ಜೋಶ್ ಹಾಗೂ ಜಂಟಲ್​​ಮೆನ್​​ ಕೆಡೆಟ್ಸ್ (ಜಿಸಿ) ಗಳು ಸಂತೋಷ ಮತ್ತು ಶಿಸ್ತನ್ನು ಪ್ರದರ್ಶಿಸಿದ್ದಾರೆ. ಪಾಸಿಂಗ್ ಔಟ್ ಪೆರೇಡ್ ಎಷ್ಟು ವಿಶೇಷವೆಂದರೆ ಇದು ಕಠಿಣ ತರಬೇತಿ ಮತ್ತು ಸಂಭಾವಿತ ಕೆಡೆಟ್‌ನನ್ನು ಯುವ ಅಧಿಕಾರಿಯಾಗಿ ಪರಿವರ್ತಿಸುವ ಪರಾಕಾಷ್ಠೆಯನ್ನು ಸಂಕೇತಿಸುತ್ತದೆ.

ಪ್ರತಿ ಆರು ತಿಂಗಳಿಗೊಮ್ಮೆ, ಐಎಂಎ ತನ್ನ ಕೆಡೆಟ್‌ಗಳಿಗೆ ಭಾರತೀಯ ಸೈನ್ಯದ ವಿವಿಧ ಶಸ್ತ್ರಾಸ್ತ್ರ ಮತ್ತು ಸೇವೆಗಳಿಗೆ ಸೇರುವ ಪಾಸಿಂಗ್ ಔಟ್ ಪೆರೇಡ್​ ಆಯೋಜಿಸಲಾಗುತ್ತದೆ. ಆದರೆ, ವಿದೇಶಿ ಕೆಡೆಟ್‌ಗಳು ಆಯಾ ದೇಶಗಳಲ್ಲಿನ ಸೈನ್ಯಕ್ಕೆ ಸೇರುತ್ತಾರೆ.

ಆದರೆ, ಐಎಂಎ ಇತಿಹಾಸದಲ್ಲಿ ಮೊದಲ ಬಾರಿಗೆ ಕೆಡೆಟ್​ಗಳ ಪೋಷಕರನ್ನು ಪಿಒಪಿಗೆ ಆಹ್ವಾನಿಸಿಲ್ಲ. ಅಲ್ಲದೇ ಕೊರೊನಾ ವೈರಸ್​ ಹೆಚ್ಚುತ್ತಿರುವ ಕಾರಣದಿಂದಾಗಿ ಕೆಡೆಟ್​ಗಳಿಗೆ ಕತ್ತಿ ಮತ್ತು ಪದಕಗಳನ್ನು ಮುಟ್ಟದಂತೆ ನಿಷೇಧಿಸಲಾಗಿತ್ತು. ಆದ್ರೆ ನೇರ ಪ್ರಸಾರದ ಮೂಲಕ ಚಾಟ್​ವುಡ್​ ಕಟ್ಟಡದ ಹೊಸ್ತಿಲನ್ನು ದಾಟುತ್ತಿರುವ ಯುವ ಕೆಡೆಟ್‌ಗಳನ್ನು ರಾಷ್ಟ್ರವು ವೀಕ್ಷಿಸುತ್ತಿದ್ದರೆ, ಪ್ರೇಕ್ಷಕರ ಗ್ಯಾಲರಿ ಮಾತ್ರ ಖಾಲಿಯಾಗಿತ್ತು.

ಪಾಸಿಂಗ್ ಔಟ್ ಪರೇಡ್​ನ ಪೈಪಿಂಗ್ ಸಮಾರಂಭದ ಬಳಿಕ ಇತರ ಸಹವರ್ತಿಗಳನ್ನು ಹುರಿದುಂಬಿಸುವ ಪುಷ್ - ಅಪ್​ಗಳನ್ನು ಮಾಡುವ ಪದ್ಧತಿಯನ್ನು ಕೊರೊನಾದ ಭಯದ ಹಿನ್ನೆಲೆಯಲ್ಲಿ ಹಾಗೂ ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕೈ ಬಿಡಲಾಯಿತು.

ಇಲ್ಲಿಯವರೆಗೆ, ಐಎಂಎ 62,139 ರಾಷ್ಟ್ರೀಯ ಮತ್ತು ವಿದೇಶಿ ಅಧಿಕಾರಿಗಳಿಗೆ ತರಬೇತಿ ನೀಡಿದೆ, ಇದರಲ್ಲಿ ಕಾಮನ್ವೆಲ್ತ್ ದೇಶಗಳ 2,413 ಅಧಿಕಾರಿಗಳೂ ಸೇರಿದ್ದಾರೆ.

ABOUT THE AUTHOR

...view details