ನವದೆಹಲಿ:ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ಪರಮಾಣು ಯುದ್ಧ ಮಾಡಲಾಗುವುದು ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಪರಮಾಣು ದಾಳಿಯ ಹೇಳಿಕೆ ನೀಡಿದ ಬಳಿಕ ಮತ್ತೊಬ್ಬ ಕ್ರಿಕೆಟಿಗ್ ಕತ್ತಿ ಹಿಡಿದು ಯುದ್ಧೋನ್ಮಾದ ಮಾತುಗಳನ್ನಾಡಿದ್ದಾರೆ.
ಸಿಕ್ಸರ್ ಬಾರಿಸುವ ಕೈಗಳಿಂದ ಕತ್ತಿ ಹಿಡಿದು ಕೊಲ್ಲುತ್ತೇನೆಂದು ಭಾರತದ ವಿರುದ್ಧ ಗುಡುಗಿದ ಪಾಕ್ನ ಮಾಜಿ ಕ್ರಿಕೆಟಿಗ.. - ಭಾರತ- ಪಾಕಿಸ್ತಾನ
ಪಾಕ್ ಕ್ರಿಕೆಟ್ನ ಮಾಜಿ ನಾಯಕ ಜಾವೇದ್ ಮಿಯಾಂದಾದ್ ಅವರು, ಕತ್ತಿ ಹಿಡಿದು ಕಾಶ್ಮೀರದ ಜನತೆಯೊಂದಿಗೆ ನಾವಿದ್ದೇವೆ. ಆಗ ಸಿಕ್ಸ್ ಬಾರಿಸಲು ಬ್ಯಾಂಟ್ ಹಿಡಿದಿದ್ದೆ. ಈಗ ಕತ್ತಿ ಹಿಡಿದಿದ್ದೇನೆ. ಇದರಿಂದ ಮನುಷ್ಯರನ್ನ ಹೊಡೆದುರಿಳಿಸಬಹುದು ಎಂದು ಭಾರತದ ವಿರುದ್ಧ ಗುಡುಗಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಪಾಕಿಸ್ತಾನ ಕ್ರಿಕೆಟ್ನ ಮಾಜಿ ನಾಯಕ ಜಾವೇದ್ ಮಿಯಾಂದಾದ್ ಅವರು, ಕತ್ತಿ ಹಿಡಿದು ಕಾಶ್ಮೀರದ ಜನತೆಯೊಂದಿಗೆ ನಾವಿದ್ದೇವೆ. ಆಗ ಸಿಕ್ಸ್ ಬಾರಿಸಲು ಬ್ಯಾಂಟ್ ಹಿಡಿದಿದ್ದೆ. ಈಗ ಕತ್ತಿ ಹಿಡಿದಿದ್ದೇನೆ. ಇದರಿಂದ ಮನುಷ್ಯರನ್ನು ಹೊಡೆದುರಿಳಿಸಬಹುದು ಎಂದು ಭಾರತದ ವಿರುದ್ಧ ಗುಡುಗಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಕಾಶ್ಮೀರ್ ಭಾಯಿಯೋ ಫಿಕರ್ ಮತ್ ಕರೋ ಹಮ್ ಆಪ್ಕಾ ಸಾಥ್ ಹೈ. ಮೇರೆ ಪಾಸ್ ಬಾಲ್ ಬೀ ಹೈ, ಪಹೇಲಾ ಚಕ್ಕಾ ಮಾರಾ ಥಾ, ಅಬ್ ಯಹ್ (ಕತ್ತಿ) ಬೀ ಹೈ. (ಕಾಶ್ಮೀರದ ಸಹೋದರರೇ ಭಯಬೇಡ. ನಾವು ನಿಮ್ಮೊಂದಿಗೆ ಇದ್ದೇವೆ. ಈ ಮೊದಲು ಸಿಕ್ಸ್ ಬಾರಿಸಲು ಬ್ಯಾಟ್ ಬಳಸುತ್ತಿದ್ದೆ, ಈಗ ಕತ್ತಿಯನ್ನು ಬಳಸುತ್ತೇನೆ). ಕತ್ತಿಯಿಂದ ಮನುಷ್ಯರನ್ನು ಕೊಲ್ಲುತ್ತೇನೆ ಎಂದು ವಿಡಿಯೋವೊಂದರಲ್ಲಿ ಹೇಳಿದ್ದಾರೆ. ಅದೇ ವಿಡಿಯೋ ಈಗ ವೈರಲಾಗಿದೆ.