ಔರಂಗಾಬಾದ್: ಬಿಹಾರದ ಔರಂಗಾಬಾದ್ನ ಸಿಲಿಯಾ ಮತದಾನ ಕೇಂದ್ರದ ಬಳಿ ಬಾಂಬ್ ಪತ್ತೆಯಾಗಿದ್ದು, ಮತದಾರರು ಬೆಚ್ಚಿಬಿದ್ದಿದ್ದಾರೆ.
ಔರಂಗಾಬಾದ್ ಮತ ಕೇಂದ್ರದ ಬಳಿ ಬಾಂಬ್ ಪತ್ತೆ
ಇಂದು ಬೆಳ್ಳಂಬೆಳಗ್ಗೆ ಬಿಹಾರದ ಔರಂಗಾಬಾದ್ನ ಸಿಲಿಯಾ ಮತದಾನ ಕೇಂದ್ರದ ಬಳಿ ಬಾಂಬ್ ಪತ್ತೆಯಾಗಿದ್ದು, ಮತದಾರರು ಬೆಚ್ಚಿಬಿದ್ದಿದ್ದಾರೆ.
ಬಾಂಬ್ ಪತ್ತೆ
ಬೆಳ್ಳಂಬೆಳಗ್ಗೆ ಮತ ಕೇಂದ್ರಕ್ಕೆ ದೌಡಾಯಿಸಿದ ಜನರು ಬೂತ್ ಮುಂದೆ ಕ್ಯೂ ನಿಂತಿದ್ದರು. ಈ ವೇಳೆ ಅನುಮಾನಾಸ್ಪದ ವಸ್ತುವೊಂದು ಕಂಡುಬಂತು. ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು ಅದನ್ನು ಪರಿಶೀಲಿಸಿದಾಗ ಅದು ಸುಧಾರಕ ಸ್ಫೋಟ ಅಥವಾ ಐಇಡಿ ಎಂದು ತಿಳಿದುಬಂದಿದೆ.
ವಿಷಯ ಗೊತ್ತಾದ ಕೂಡಲೇ ಸಾರ್ವಜನಿಕರು ಮತಕೇಂದ್ರದಿಂದ ಕಾಲ್ಕಿತ್ತಿದ್ದಾರೆ. ಮತ ಕೇಂದ್ರದ ಹೊರಗೆ ಅಳವಡಿಸಲಾಗಿರುವ ಸಿಸಿ ಕ್ಯಾಮೆರಾ ಪರಿಶೀಲಿಸಲಾಗುತ್ತಿದ್ದು, ಸ್ಫೋಟಕ ಇಟ್ಟ ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.