ಬಾರಾಮುಲ್ಲಾ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಉಗ್ರರು ಹುದುಗಿಸಿಟ್ಟಿದ್ದ ಸುಧಾರಿತ ಸ್ಫೋಟಕ ಸಾಧನ (ಐಇಡಿ)ವನ್ನು ಭದ್ರತಾ ಪಡೆ ವಶಪಡಿಸಿಕೊಂಡಿದ್ದು, ದೊಡ್ಡ ದುರಂತವನ್ನು ತಪ್ಪಿಸಲಾಗಿದೆ.
ಬಾರಾಮುಲ್ಲಾದಲ್ಲಿ ಐಇಡಿ ಪತ್ತೆ... ತಪ್ಪಿದ ದುರಂತ
ಬಾರಾಮುಲ್ಲಾ ಜಿಲ್ಲೆಯ ವಾಟರ್‌ಗ್ಯಾಮ್ ಪ್ರದೇಶದ ಮುಖ್ಯ ರಸ್ತೆಯಲ್ಲಿ ಐಇಡಿ ಪತ್ತೆಯಾಗಿದ್ದು, ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ದೌಡಾಯಿಸಿದೆ.
ಬಾರಾಮುಲ್ಲಾದ ವಾಟರ್‌ಗ್ಯಾಮ್ ಪ್ರದೇಶದ ಮುಖ್ಯ ರಸ್ತೆಯಲ್ಲಿ ಐಇಡಿ ಪತ್ತೆಯಾಗಿದ್ದು, ರಸ್ತೆಯ ಸಂಚಾರ ಸ್ಥಗಿತಗೊಳಿಸಲಾಗಿದೆ. ಐಇಡಿ ನಾಶಪಡಿಸಲು ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ದೌಡಾಯಿಸಿದೆ. ಭದ್ರತಾ ಪಡೆ ಹಾಗೂ ವಿಐಪಿಗನ್ನು ಗುರಿಯಾಗಿಸಿಕೊಂಡು ಉಗ್ರರು ಹೆದ್ದಾರಿಗಳಲ್ಲಿ ಹೀಗೆ ಐಇಡಿಗಳನ್ನು ಇಡುತ್ತಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ನಾಲ್ಕು ದಿನಗಳಲ್ಲಿ ಉತ್ತರ ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಪತ್ತೆ ಹಚ್ಚಿದ ಎರಡನೇ ಐಇಡಿ ಇದಾಗಿದೆ. ಸೋಮವಾರ ಕುಪ್ವಾರಾ ಜಿಲ್ಲೆಯ ಡ್ರಗ್ಮುಲ್ಲಾ ಪ್ರದೇಶದಲ್ಲಿ ಭದ್ರತಾ ಪಡೆ ಯಸಿಬ್ಬಂದಿ ಇದೇ ರೀತಿಯ ಐಇಡಿಯನ್ನು ವಶಪಡಿಸಿಕೊಂಡಿದ್ದರು.