ಕರ್ನಾಟಕ

karnataka

ETV Bharat / bharat

'ಬಿಎಂಸಿ ಕ್ರಮಕ್ಕೆ ನಾನು ಜವಾಬ್ದಾರನಲ್ಲ': ಶಿವಸೇನೆ ಸಂಸದ ಸಂಜಯ್ ರಾವತ್​​ - ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದ ಕಂಗನಾ

ಶಿವಸೇನೆ ಸಂಸದ ಸಂಜಯ್ ರಾವತ್, "ನಾನು ಯಾವುದೇ ನಟರಿಗೂ ಬೆದರಿಕೆ ಹಾಕಿಲ್ಲ. ಆದರೆ ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರ(ಪಿಒಕೆ)ಕ್ಕೆ ಹೋಲಿಸಿದ ಹಿನ್ನೆಲೆಯಲ್ಲಿ ಕೋಪಗೊಂಡಿದ್ದೇನೆ" ಎಂದು ಹೇಳಿದ್ದಾರೆ.

ಕಂಗನಾ-ಸಂಜಯ್​ ವಿವಾದ
ಕಂಗನಾ-ಸಂಜಯ್​ ವಿವಾದ

By

Published : Sep 10, 2020, 12:57 PM IST

Updated : Sep 10, 2020, 1:06 PM IST

ಮುಂಬೈ:ಬೃಹತ್​​ ಮುಂಬೈ ಮಹಾನಗರ ಪಾಲಿಕೆ ಬುಧವಾರದಂದು ಕಂಗನಾ ಮನೆ ತೆರವು ಕ್ರಮದ ಕುರಿತು ಶಿವಸೇನೆ ಸಂಸದ ಸಂಜಯ್​ ರಾವತ್​ ಪ್ರತಿಕ್ರಿಯೆ ನೀಡಿದ್ದಾರೆ.

ಶಿವಸೇನೆ ಸಂಸದ ಸಂಜಯ್ ರಾವತ್ ಮಾತನಾಡಿದ್ದು, "ನಾನು ಯಾವುದೇ ನಟರಿಗೂ ಬೆದರಿಕೆ ಹಾಕಿಲ್ಲ. ಆದರೆ ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರ(ಪಿಒಕೆ)ಕ್ಕೆ ಹೋಲಿಸಿದ ಹಿನ್ನೆಲೆಯಲ್ಲಿ ಕೋಪಗೊಂಡಿದ್ದೇನೆ" ಎಂದು ಹೇಳಿದ್ದಾರೆ.

"ನಾನು ಕಂಗನಾಗೆ ಯಾವತ್ತೂ ಬೆದರಿಕೆ ಹಾಕಿಲ್ಲ. ಮುಂಬೈಯನ್ನು ಪಿಒಕೆಗೆ ಹೋಲಿಸಿದ ಬಗ್ಗೆ ಮಾತ್ರ ನಾನು ಕೋಪ ವ್ಯಕ್ತಪಡಿಸಿದ್ದೇನೆ. ಬಿಎಂಸಿ ತೆಗೆದುಕೊಂಡ ಕ್ರಮಕ್ಕೆ ನಾನು ಜವಾಬ್ದಾರನಲ್ಲ. ಕಂಗನಾ ಮುಂಬೈನಲ್ಲಿ ವಾಸಿಸಬಹುದು" ಎಂದು ಹೇಳಿದರು.

ಬಾಂಬೆ ಹೈಕೋರ್ಟ್​ ಕಂಗನಾ ಕಚೇರಿಯನ್ನು ಕೆಡವದಂತೆ ಆದೇಶ ನೀಡಿದ್ದರೂ ಸಹ ಬಿಎಂಸಿಯು ಬುಧವಾರ ತರವಿಗೆ ಮುಂದಾಗಿತ್ತು. ಈ ಹಿನ್ನೆಲೆಯಲ್ಲಿ ಕಂಗನಾ ಕೋರ್ಟ್​ ಮೊರೆ ಹೋಗಿದ್ದಾರೆ.

Last Updated : Sep 10, 2020, 1:06 PM IST

ABOUT THE AUTHOR

...view details