ಹೈದರಾಬಾದ್ (ತೆಲಂಗಾಣ) : ಲಾಕ್ ಡೌನ್ ವೇಳೆ ನಗರದ ಟೆಕ್ಕಿಯೊಬ್ಬ ಸಾಮಾಜಿಕ ಕಾರ್ಯಕರ್ತನಾಗಿ ಬದಲಾಗಿದ್ದು, ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೋರೆಶನ್ (ಜಿಹೆಚ್ಎಂಸಿ) ಸಹಯೋಗದಲ್ಲಿ 1,300ಕ್ಕೂ ಹೆಚ್ಚು ಜನರಿಗೆ ಆಹಾರ ಮತ್ತು ಆಶ್ರಯ ನೀಡುತ್ತಿದ್ದಾರೆ.
ಲಾಕ್ ಡೌನ್ ವೇಳೆ ಸಾಮಾಜಿಕ ಕಾರ್ಯಕರ್ತನಾಗಿ ಬದಲಾದ ಹೈದರಾಬಾದ್ ಟೆಕ್ಕಿ - ಸಾಫ್ಟ್ವೇರ್ ಕಂಪನಿ ಇವೊಕ್ ಟೆಕ್ನಾಲಾಜಿಸ್
ಸಾಫ್ಟ್ವೇರ್ ಕಂಪನಿ ಇವೊಕ್ ಟೆಕ್ನಾಲಾಜಿಸ್ನ ಹಿರಿಯ ಯೋಜನಾ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಹರೀಶ್ ದಗ್ಗಾ, ಹೈದರಾಬಾದ್ ಮುನ್ಸಿಪಲ್ ಕಾರ್ಪೋರೆಶನ್ ಜೊತೆಗೂಡಿ ಲಾಕ್ ಡೌನ್ ವೇಳೆ ನಿರಾಶ್ರಿತರಿರಾಗಿರುವವರಿಗೆ ಆಶ್ರಯ ಕಲ್ಪಿಸಿಕೊಡುತ್ತಿದ್ದಾರೆ.
ಸಾಫ್ಟ್ವೇರ್ ಕಂಪನಿ ಇವೊಕ್ ಟೆಕ್ನಾಲಾಜಿಸ್ನ ಹಿರಿಯ ಯೋಜನಾ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಹರೀಶ್ ದಗ್ಗಾ ಮಾನವೀಯ ಕಾರ್ಯ ಮಾಡುತ್ತಿರುವ ಟೆಕ್ಕಿ. ತನ್ನ ಕಾರ್ಯದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಪ್ರಧಾನಿ ಲಾಕ್ ಡೌನ್ ಘೋಷಣೆ ಮಾಡಿದ ಕ್ಷಣದಿಂದ ಕೇಂದ್ರ ವಲಯ ಡಿಸಿಪಿ ಜೊತೆಗೂಡಿ ನಾವು ಜಂಟಿ ಸಮೀಕ್ಷೆಗಳನ್ನು ನಡೆಸಿ ಮಾಹಿತಿ ಕಲೆ ಹಾಕಿದೆವು. ಆರಂಭದಲ್ಲಿ ನಾವು 400 ರಿಂದ 500 ಜನರನ್ನು ಗುರುತಿಸಿದೆವು. ಬಳಿಕ ಅವರಿಗೆ ವಸತಿ ವ್ಯವಸ್ಥೆ ಮಾಡಿಕೊಡಲು ಸರಿಯಾದ ಜಾಗ ಹುಡುಕಿ ಕೊನೆಗೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ವಸ್ತು ಪ್ರದರ್ಶನ ಮೈದಾನವನ್ನು ಪಡೆದುಕೊಂಡೆವು. ಬಳಿಕ ಜನರನ್ನು ಅಲ್ಲಿಗೆ ಕರೆತಂದು ಸಾಮಾಜಿಕ ಅಂತರ ಕಾಯ್ದುಕೊಂಡು ಅವರಿಗೆ ಆಹಾರ, ಬಟ್ಟೆ, ಖರ್ಚಿಗೆ ಹಣ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಿಕೊಟ್ಟಿದ್ದೇವೆ ಎಂದಿದ್ದಾರೆ.
ಸದ್ಯ,1,300ರಷ್ಟು ಜನ ಇಲ್ಲಿ ಆಶ್ರಯ ಪಡೆಯುತ್ತಿದ್ದು, ಈ ಸಂಖ್ಯೆ 1,500ರಷ್ಟು ಆಗುವ ಸಂಭವವಿದೆ ಎಂದಿದ್ದಾರೆ.