ಕರ್ನಾಟಕ

karnataka

ETV Bharat / bharat

6 ವರ್ಷದ ಬಾಲಕಿ ರೇಪ್​ ಅಂಡ್​ ಮರ್ಡರ್​.. ಕೀಚಕನ ಕೈಗೆ ಬಂಧನ

ಸಹೋದರನೊಂದಿಗೆ ಹೋಳಿ ಆಡುತ್ತಿದ್ದ ವೇಳೆ ಬಾಲಕಿ ಅಪಹರಣ ಮಾಡಿದ್ದ ವ್ಯಕ್ತಿ ಆಕೆಯ ಮೇಲೆ ಅತ್ಯಾಚಾರ ಮಾಡಿ, ಕೊಲೆ ಮಾಡಿದ್ದನು. ಈಗ ಆತನ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

By

Published : Mar 22, 2019, 11:22 PM IST

ಸಾಂದರ್ಭಿಕ ಚಿತ್ರ

ಹೈದರಾಬಾದ್ ​​: ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿ, ಕೊಲೆ ಮಾಡಿದ ಆರೋಪದಡಿ ವ್ಯಕ್ತಿಯೋರ್ವನ ಬಂಧನ ಮಾಡುವಲ್ಲಿ ಇಲ್ಲಿನ ಪೊಲೀಸರು ಯಶಸ್ವಿಯಾಗಿದ್ದಾರೆ. ಹೋಳಿ ಹಬ್ಬದ ಸಂಭ್ರಮಾಚರಣೆ ದಿನ ಈ ಘಟನೆ ನಡೆದಿತ್ತು.

ನಿನ್ನೆ ಸಹೋದರನೊಂದಿಗೆ ಆರು ವರ್ಷದ ಬಾಲಕಿ ಮನೆ ಮುಂದೆ ಬಣ್ಣ ಆಡುತ್ತಿದ್ದಳು. ಈ ವೇಳೆ 20 ವರ್ಷದ ಕಾಮುಕ ಆಕೆಯನ್ನ ರೈಲ್ವೆ ಹಳಿ ಬಳಿಗೆ ಕರೆದ್ಯೊಯ್ದು ಅತ್ಯಾಚಾರ ಮಾಡಿ, ಕೊಲೆ ಮಾಡಿದ್ದನು. ಸಂಜೆಯಾದರೂ ಮಗು ಮನೆಗೆ ಬಾರದ ಕಾರಣ ಪೋಷಕರು ಅಲ್ವಾ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ವೇಳೆ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾಗ, ಸ್ಥಳೀಯರು ಬಾಲಕಿ ಮೃತದೇಹ ನೋಡಿರುವ ಮಾಹಿತಿ ನೀಡಿದ್ದಾರೆ. ಪೊಲೀಸರು ಪೋಷಕರೊಂದಿಗೆ ಸೇರಿ ಸ್ಥಳಕ್ಕೆ ಹೋಗಿ ಮೃತದೇಹ ವಶಕ್ಕೆ ಪಡೆದುಕೊಂಡಿದ್ದಾರೆ.

ಕಾಮುಕ ವ್ಯಕ್ತಿ ವೈರ್​ನಿಂದ ಬಾಲಕಿಯ ಕುತ್ತಿಗೆಗೆ ಕಟ್ಟಿದ್ದಾನೆ. ತದನಂತರ ಆಕೆಯ ಮೇಲೆ ಅತ್ಯಾಚಾರಗೈದಿದ್ದಾನೆ. ಆಕೆ ಸಾವನ್ನಪ್ಪಿದ್ದರೂ ತನ್ನ ಕೃತ್ಯ ನಿಲ್ಲಿಸಿಲ್ಲ ಎಂದು ಡಿಸಿಪಿ ಪಿವಿ ಪದ್ಮಜ್​ ತಿಳಿಸಿದ್ದಾರೆ. ಈತನ ಅರೆಸ್ಟ್​ ಮಾಡಿದಾಗ ಕೂಡ ದ್ವಂದ್ವ ಹೇಳಿಕೆ ನೀಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆದರೆ, ಪೊಲೀಸರು ಕಂಬಿ ಹಿಂದೆ ತಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ABOUT THE AUTHOR

...view details