ಕಡಪ(ಆಂಧ್ರ ಪ್ರದೇಶ):ಟಚ್ ಸ್ಕ್ರೀನ್ ಫೋನ್ ಖರೀದಿಸಿ ಕೊಡಲಿಲ್ಲವೆಂದು ವ್ಯಕ್ತಿವೋರ್ವ ತನ್ನ ಹೆಂಡ್ತಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಪತ್ನಿಯನ್ನು ಸಿಗರೇಟ್ನಿಂದ ಸುಟ್ಟು, ಹಿಂಸೆ ಕೊಟ್ಟಿದ್ದಲ್ಲದೆ ಮನಬಂದಂತೆ ಥಳಿಸಿ ಕೊಲೆ ಮಾಡಿರುವ ಪ್ರಕರಣ ಆಂಧ್ರ ಪ್ರದೇಶದ ಜನರನ್ನು ಬೆಚ್ಚಿಬೀಳಿಸಿದೆ.
ಕಡಪದ ಅಲ್ಲೂರಿ ಸೀತಾರಾಮರಾಜು ನಗರಕ್ಕೆ ಸೇರಿದ ಚಾಂದಿನಿಗೆ (22) ಅದೇ ನಗರದ ಮಾರುತಿ ಜೊತೆ ಕೆಲ ವರ್ಷಗಳ ಹಿಂದೆ ಮದುವೆಯಾಗಿತ್ತು. ವಿವಾಹದ ಸಮಯದಲ್ಲಿ ವರದಕ್ಷಿಣೆ ಅಂತಾ ಚಾಂದನಿ ಕುಟುಂಬಸ್ಥರು ಮಾರುತಿ ಕುಟುಂಬಸ್ಥರಿಗೆ 4 ಲಕ್ಷ ರೂಪಾಯಿ ಕೊಟ್ಟಿದ್ದರು. ಮಾರುತಿ ಮುಸ್ಲಿಂ ಆದ್ರೂ ಆತನ ತಂದೆ-ತಾಯಿ ಹಿಂದು ಹೆಸರು ಇಟ್ಟಿದ್ದರು.
ಇನ್ನು ಮಾರುತಿ ಕೆಲ ಅಂಗಡಿಗಳಿಗೆ ಸಾಂಬ್ರಾಣಿ ಧೂಪ ಹಾಕಿ ಹಣ ಸಂಪಾದಿಸುತ್ತಿದ್ದ. ಮಾರುತಿ, ಚಾಂದಿನಿ ದಂಪತಿಗೆ ನಾಲ್ಕ ವರ್ಷದ ಮಗ ಇದ್ದು, ಚಾಂದಿನಿ ಮತ್ತೆ ಗರ್ಭಿಣಿ ಆಗಿದ್ದರು. ಮದುವೆ ಆಗಿದಾಗಿನಿಂದಲೂ ಮಾರುತಿ ಹೆಚ್ಚಿನ ವರದಕ್ಷಿಣೆ ತರುವಂತೆ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಇತ್ತಿಚೇಗೆ ಸ್ಮಾರ್ಟ್ ಫೋನ್ ಕೊಡಸಲಿಲ್ಲವೆಂದು ಕೈ ಸಹ ಮುರಿದಿದ್ದನಂತೆ.