ಚೆನ್ನೈ:ಎರಡು ದಿನಗಳಿಂದ ತಮಿಳುನಾಡಿನಲ್ಲಿ ರಣಭೀಕರ ಮಳೆಯಾಗುತ್ತಿದ್ದು, ಈಗಾಗಲೇ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಮಳೆಯ ರೌದ್ರನರ್ತನಕ್ಕೆ ತಮಿಳರು ಕಂಗೆಟ್ಟು ಹೋಗಿದ್ದಾರೆ.
ತಮಿಳುನಾಡಿನಲ್ಲಿ ರಣಭೀಕರ ಮಳೆ: ಮನೆ ಗೋಡೆ ಕುಸಿದು 17 ಮಂದಿ ಸಾವು
ತಮಿಳುನಾಡಿನಲ್ಲಿ ವರುಣನ ಅಬ್ಬರ ಜೋರಾಗಿದ್ದು, ಮಳೆಯ ರೌದ್ರನರ್ತನಕ್ಕೆ ಇಲ್ಲಿಯವರೆಗೆ 25 ಮಂದಿ ಸಾವಿಗೀಡಾಗಿದ್ದಾರೆ. ಅನೇಕರು ಮನೆ-ಮಠ ಕಳೆದುಕೊಂಡಿದ್ದಾರೆ.
ಇದರ ಮಧ್ಯೆ ಕೊಯಮತ್ತೂರಿನ ನಾಡೂರು ಗ್ರಾಮದಲ್ಲಿ ಮೂರು ಮನೆಗಳ ಗೋಡೆ ಕುಸಿದ ಪರಿಣಾಮ 17 ಮಂದಿ ಸಾವನ್ನಪ್ಪಿದ್ದು, ಇದರಲ್ಲಿ ಏಳು ವರ್ಷದ ಮಗು ಸಹ ಸೇರಿದೆ. ಮುಂದಿನ ಕೆಲ ದಿನಗಳ ಕಾಲ ವರುಣ ಹೆಚ್ಚಿನ ಪ್ರಮಾಣದಲ್ಲಿ ಅಬ್ಬರಿಸಲಿರುವ ಕಾರಣ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ಸಮುದ್ರದತ್ತ ತೆರಳದಂತೆ ತಿಳಿಸಿದೆ.
ಮಳೆಯಿಂದಾಗಿ ಇಲ್ಲಿಯವರೆಗೆ 25 ಮಂದಿ ಸಾವಿಗೀಡಾಗಿದ್ದು, ಸಾವಿರಕ್ಕೂ ಹೆಚ್ಚು ಜನರಿಗೆ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ನೀಡಲಾಗಿದೆ. ಮದ್ರಾಸ್ ವಿಶ್ವವಿದ್ಯಾಲಯ ಹಾಗೂ ಅಣ್ಣಾ ವಿವಿಯಲ್ಲಿ ನಡೆಯಬೇಕಾಗಿದ್ದ ಪರೀಕ್ಷೆ ಮುಂದೂಡಿಕೆ ಮಾಡಿ ಆದೇಶ ಹೊರಡಿಸಲಾಗಿದೆ.