ಮುಂಬೈ: ಅತೃಪ್ತರು ತಂಗಿರುವ ಮುಂಬೈನ ರಿನಾಯ್ಸನ್ಸ್ ಹೊಟೇಲ್‌ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಅತೃಪ್ತ ಶಾಸಕರಿರುವ ಮುಂಬೈನ ರಿನಾಯ್ಸನ್ಸ್ ಹೊಟೇಲ್‌ಗೆ ಪೊಲೀಸ್ ಬಂದೋಬಸ್ತ್! - ಮುಂಬೈ
ಅಜ್ಞಾತವಾಸದಿಂದ ಅತೃಪ್ತ ಶಾಸಕರು ಇಂದು ಹೊರ ಬರುತ್ತಾರಾ ಎಂಬ ಕುತೂಹಲ ಮೂಡಿದೆ. ಇನ್ನು ಮುಂಬೈನ ರಿನಾಯ್ಸನ್ಸ್ ಹೊಟೇಲ್‌ನಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.
ಅತೃಪ್ತರು ಸದ್ಯ ಅಜ್ಞಾತ ವಾಸ ಮುಂದುವರಿಸಿದ್ದು, ಇಂದಿನ ವಿಶ್ವಾಸ ಮತಯಾಚನೆ ಬಳಿಕ ಬಹುಶ: ಅಜ್ಞಾತ ವಾಸದಿಂದ ಮುಕ್ತಿ ಪಡೆಯಲಿದ್ದಾರೆ. ಸದ್ಯಕ್ಕೆ ಮುಂಬೈನ ರಿನಾಯ್ಸನ್ಸ್ ಹೊಟೇಲ್‌ಗೆ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಇಂದು ಹೊಟೇಲ್ ಮುಂಭಾಗ ಯೂತ್ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ ಎನ್ನಲಾಗಿದ್ದು, ಈ ಹಿನ್ನೆಲೆ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.
ಇನ್ನು ಮೂಲಗಳ ಪ್ರಕಾರ ಸುಪ್ರೀಂ ತೀರ್ಪು ಹಿನ್ನೆಲೆ ಎಲ್ಲಾ ಅತೃಪ್ತ ಶಾಸಕರು ದೆಹಲಿಗೆ ತೆರಳಿದ್ದಾರೆ ಎನ್ನಲಾಗ್ತಿದ್ದರೆ, ಮೊತ್ತೊಂದುಕಡೆ ಪ್ರಕಾರ ರಿನಾಯ್ಸನ್ಸ್ ಹೊಟೇಲ್ನಲ್ಲೇ ವಾಸ್ತವ್ಯ ಮುಂದುವರೆಸಲಿದ್ದಾರೆ ಎನ್ನಲಾಗ್ತಿದೆ.