ಕರ್ನಾಟಕ

karnataka

ETV Bharat / bharat

ದಕ್ಷಿಣ ಧ್ರುವದ ಆಯ್ಕೆಯ ಹಿಂದಿದೆ ಈ ಕಾರಣ! ನಾಸಾಗೂ ಅಗತ್ಯ ಚಂದ್ರಯಾನ-2 ಯಶಸ್ಸು - ಇಸ್ರೋ ಚಂದ್ರಯಾನ-2

ಚಂದ್ರನ ದಕ್ಷಿಣ ಧ್ರುವದಲ್ಲಿ ಸುರಕ್ಷಿತ ಲ್ಯಾಂಡಿಂಗ್​​ಗೆ ಪ್ರಯತ್ನ ಮಾಡಿರುವ ಕಾರಣಕ್ಕೆ ಎರಡನೇ ಬಾರಿಗೆ ಚಂದ್ರನ ಅಂಗಳದತ್ತ ಧಾವಿಸಿರುವ ಇಸ್ರೋ ಯೋಜನೆ ಈ ಬಾರಿ ಭಿನ್ನವಾಗಿದೆ. ಹಾಗಿದ್ದರೆ ಈ ದಕ್ಷಿಣ ಧ್ರುವ ಆಯ್ಕೆ ಯಾಕೆ ಎನ್ನುವ ನಿಮ್ಮ ಕುತೂಹಲ ತಣಿಸುವ ಮಾಹಿತಿ ಇಲ್ಲಿದೆ.

ಚಂದ್ರಯಾನ-2

By

Published : Sep 6, 2019, 8:52 AM IST

ನವದೆಹಲಿ: ಇಸ್ರೋ ವಿಜ್ಞಾನಿಗಳು ಶಶಿಯ ಮೇಲ್ಮೈ ಸ್ಪರ್ಶಿಸಲು ಕಾತರರಾಗಿದ್ದು, ಈ ಐತಿಹಾಸಿಕ ಕ್ಷಣಕ್ಕೆ ಕೆಲ ಗಂಟೆಗಳು ಮಾತ್ರವೇ ಬಾಕಿ ಇದೆ. ಈ ಮಹೋನ್ನತ ಕ್ಷಣಕ್ಕೂ ಮುನ್ನ ಈ ಯೋಜನೆಯ ಅತೀ ಮುಖ್ಯ ಅಂಶದ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಇಲ್ಲಿದೆ.

ಚಂದ್ರನ ದಕ್ಷಿಣ ಧ್ರುವದಲ್ಲಿ ಸುರಕ್ಷಿತ ಲ್ಯಾಂಡಿಂಗ್​​ಗೆ ಪ್ರಯತ್ನ ಮಾಡಿರುವ ಕಾರಣಕ್ಕೆ 2ನೇ ಬಾರಿಗೆ ಚಂದ್ರನ ಅಂಗಳದತ್ತ ಧಾವಿಸಿರುವ ಇಸ್ರೋ ಈ ಯೋಜನೆ ಹೆಚ್ಚು ಕುತೂಹಲ ಕೆರಳಿಸಿದೆ. ಹಾಗಿದ್ದರೆ ಈ ದಕ್ಷಿಣ ಧ್ರುವ ಆಯ್ಕೆ ಏಕೆ ಎನ್ನುವ ನಿಮ್ಮ ಕುತೂಹಲದ ಪ್ರಶ್ನೆಗೆ ಇಲ್ಲಿದೆ ಉತ್ತರ.

ಚಂದ್ರಯಾನ-2 ಅಪೋಲೋ ಮಿಷನ್‌ಗಿಂತ ಹೇಗೆ ಭಿನ್ನ?

ಚಂದ್ರಯಾನ-1ರಲ್ಲಿ ಚಂದ್ರನ ಅಂಗಳದಲ್ಲಿ ನೀರಿನ ಅಂಶವಿದೆ ಎನ್ನುವ ಮಹತ್ವದ ಶೋಧನೆ ಮಾಡಿತ್ತು. ಈ ಆವಿಷ್ಕಾರದ ಮುಂದುವರೆದ ಭಾಗವೇ ಚಂದ್ರಯಾನ-2 ಎನ್ನುತ್ತಾರೆ ಇಸ್ರೋ ವಿಜ್ಞಾನಿ ಬಳಗ. ಆದರೆ ಚಂದ್ರಯಾನ-2ರ ಆಯ್ಕೆ ದಕ್ಷಿಣ ಧ್ರುವ ಮತ್ತು ಸುರಕ್ಷಿತ ಲ್ಯಾಂಡಿಂಗ್. ಇವೆರಡೂ ಸವಾಲಿನಲ್ಲಿ ಇಸ್ರೋ ಗೆದ್ದಲ್ಲಿ ಈ ಸಾಧನೆಗೈದ ಮೊದಲ ರಾಷ್ಟ್ರ ಎನ್ನುವ ಹೆಗ್ಗಳಿಕೆ ಭಾರತದ್ದಾಗಲಿದೆ.

ನೆರಳಿನ ಪ್ರದೇಶದಲ್ಲಿ ನೀರಿನ ಸಾಧ್ಯತೆ:

ಚಂದ್ರನ ದಕ್ಷಿಣ ಧ್ರುವ ಉತ್ತರ ಧ್ರುವಕ್ಕೆ ಹೋಲಿಸಿದರೆ ಅತ್ಯಂತ ಹೆಚ್ಚು ನೆರಳಿನಿಂದ ಆವೃತವಾಗಿದೆ. ನೆರಳಿನ ಪ್ರದೇಶದಲ್ಲಿ ನೀರಿನ ಅಂಶ ಕೊಂಚ ಹೆಚ್ಚಾಗಿರುವ ಸಾಧ್ಯತೆಯಿಂದ ಇಸ್ರೋ ದಕ್ಷಿಣ ಧ್ರುವವನ್ನು ಆರಿಸಿಕೊಂಡು ಆ ಭಾಗದಲ್ಲಿ ಲ್ಯಾಂಡರ್ ಇಳಿಸುವ ಪ್ರಯತ್ನಕ್ಕೆ ಕೈಹಾಕಿದೆ.

ಚಂದಮಾಮನ ಅಂಗಳಕ್ಕೆ ಇಳಿಯಲು ಸಜ್ಜಾದ ಚಂದ್ರಯಾನ-2 ವಿಶೇಷತೆಗಳೇನು?

ಚಂದ್ರನ ಮೇಲ್ಮೈಯನ್ನು ಮತ್ತಷ್ಟು ಅಧ್ಯಯನ ಮಾಡುವ ಪ್ರಯತ್ನವೂ ಇಲ್ಲಿ ಸೇರಿದೆ. ನೀರಿನ ಅಂಶದ ಬಗ್ಗೆ ಹೆಚ್ಚಿನ ಅಧ್ಯಯನಕ್ಕೆ ಇಸ್ರೋ ಒತ್ತು ನೀಡಿದೆ. ಭವಿಷ್ಯ ದೃಷ್ಟಿಯಿಂದ ಇಸ್ರೋ ಈ ಯೋಜನೆ ಅತ್ಯಂತ ಮಹತ್ವದ್ದಾಗಿದೆ.

ದಕ್ಷಿಣ ಧ್ರುವ ಎನ್ನುವ ಸವಾಲು:

ಚಂದ್ರನ ಬಗೆಗಿನ ಕುತೂಹಲ ಹಾಗೂ ಅಲ್ಲಿನ ಬಗ್ಗೆ ಸಂಶೋಧನೆಗೆ ತೆರಳಿರುವ ರಾಷ್ಟ್ರಗಳ ಸಂಖ್ಯೆ ನಾಲ್ಕು. ಭಾರತ ಸೇರಿದಂತೆ ಅಮೆರಿಕ, ರಷ್ಯಾ ಹಾಗೂ ಚೀನಾ ದೇಶಗಳು ಶಶಿನ ಅಂಗಳಕ್ಕೆ ಈಗಾಗಲೇ ವಿಸಿಟ್ ನೀಡಿವೆ. ಆದರೆ ದಕ್ಷಿಣ ಧ್ರುವದಲ್ಲಿ ಈ ಮೊದಲು ಲ್ಯಾಂಡರ್ ಇಳಿಸುವ ಪ್ರಯತ್ನಕ್ಕೆ ಯಾವ ರಾಷ್ಟ್ರವೂ ಕೈಹಾಕಿಲ್ಲ.

ದಕ್ಷಿಣ ಧ್ರುವದಲ್ಲಿ ಭಾರತದ ಈ ಸಾಹಸದ ಸಕ್ಸಸ್ ಮೇಲೆ ಮುಂಬರುವ ನಾಸಾ ಯೋಜನೆಯ ಭವಿಷ್ಯವೂ ಅಡಗಿದೆ. 2024ರಂದು ಅರ್ಟೆಮಿಸ್ ಪ್ರೋಗ್ರಾಮ್ ಅಡಿಯಲ್ಲಿ ಹಲವಾರು ರೋಬೋಟಿಕ್ ಲ್ಯಾಂಡರ್​ಗಳನ್ನು ನಾಸಾ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಸುವ ಯೋಜನೆ ಹಾಕಿಕೊಂಡಿದೆ. ಹೀಗಾಗಿ ಇಸ್ರೋದ ಸದ್ಯದ ಪ್ರಯತ್ನ ಯಶಸ್ಸಿನ ಮೇಲೆ ನಾಸಾ ತನ್ನ ಯೋಜನೆಯನ್ನು ಪೂರ್ಣಪ್ರಮಾಣದಲ್ಲಿ ಕಾರ್ಯಗತಗೊಳಿಸಲಿದೆ.

ABOUT THE AUTHOR

...view details