ನವದೆಹಲಿ:ಮೊಬೈಲ್ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್ ಮೇಲೆ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಅವಲಂಬಿತರಾಗಿದ್ದಾರೆ. ಸ್ಮಾರ್ಟ್‌ಪೋನ್ ಜನರ ಬದುಕಿನ ಅವಿಭಾಜ್ಯ ಅಂಗವೇ ಆಗಿಹೋಗಿದ್ದು ಅವುಗಳನ್ನು ಬಿಟ್ಟು ಬದುಕದ ಸ್ಥಿತಿಗೆ ಬಂದಿದ್ದಾರೆ. ಇದೇ ವಿಚಾರವಾಗಿ ಇಲ್ಲೊಂದು ಸಮೀಕ್ಷೆ ಎಚ್ಚರಿಕೆಯ ಕರೆಗಂಟೆ ಬಾರಿಸಿದೆ.
ಸಮೀಕ್ಷೆಯ ಪ್ರಕಾರ, ಮೊಬೈಲ್ ಬಳಕೆದಾರರು ಹೆಚ್ಚಾಗಿ ಶೌಚಾಲಯದಲ್ಲಿರುವಾಗಲೂ ಮೊಬೈಲ್ ಬಳಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಈ ವೇಳೆ ತಾಸುಗಟ್ಟಲೆ ಕುಳಿತು ಅವರು ವಿಡಿಯೋ ನೋಡುವುದು, ಚಾಟಿಂಗ್ ಮಾಡುತ್ತಾರೆ. ಇದರಿಂದಾಗಿ ಅವರಿಗೆ ಮೂಲವ್ಯಾಧಿ (ಪೈಲ್ಸ್) ಬರಬಹುದು ಎಂದು ಎಚ್ಚರಿಸಿದೆ.