ಕರ್ನಾಟಕ

karnataka

ETV Bharat / bharat

ಹಥ್ರಾಸ್​ ಅತ್ಯಾಚಾರ ಪ್ರಕರಣ: ಸುಪ್ರೀಂಕೋರ್ಟ್​ನಿಂದ ಇಂದು ಮಹತ್ವದ ತೀರ್ಪು!

ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿರುವ ಹಥ್ರಾಸ್​ ಅತ್ಯಾಚಾರ ಪ್ರಕರಣದ ಬಗ್ಗೆ ಸುಪ್ರೀಂಕೋರ್ಟ್​ನಿಂದ ಮಹತ್ವದ ಆದೇಶ ಹೊರಬಿಳಲಿದೆ.

Supreme court
Supreme court

By

Published : Oct 27, 2020, 3:23 AM IST

Updated : Oct 27, 2020, 3:44 PM IST

ನವದೆಹಲಿ: ಸೆಪ್ಟೆಂಬರ್​ 14ರಂದು ಉತ್ತರ ಪ್ರದೇಶದ ಹಥ್ರಾಸ್​ನಲ್ಲಿ ನಡೆದ ಯುವತಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸುಪ್ರೀಂಕೋರ್ಟ್​ನಿಂದ ಮಹತ್ವದ ಆದೇಶ ಹೊರಬೀಳಲಿದೆ. ಪ್ರಕರಣದ ತನಿಖೆ ಕೋರ್ಟ್​ ಮೇಲುಸ್ತುವಾರಿಯಲ್ಲಿ ನಡೆಸಬೇಕೋ ಅಥವಾ ಬೇಡ್ವೋ ಎಂಬ ಬಗ್ಗೆ ತೀರ್ಪು ಪ್ರಕಟಗೊಳ್ಳಲಿದೆ.

ಪ್ರಕರಣದ ವಿಚಾರಣೆ ಕೋರ್ಟ್ ಮೇಲುಸ್ತುವಾರಿಯಲ್ಲೇ ನಡೆಸಬೇಕು ಎಂದು ಅರ್ಜಿ ಸಲ್ಲಿಕೆ ಮಾಡಲಾಗಿದೆ. ಸುಪ್ರೀಂಕೋರ್ಟ್​ನ ಮುಖ್ಯನ್ಯಾಯಮೂರ್ತಿ ಎಸ್​.ಎ ಬೊಬ್ಡೆ, ಜಸ್ಟೀಸ್​​ ಎ.ಎಸ್​ ಬೋಪಣ್ಣ ಹಾಗೂ ಜಸ್ಟೀಸ್​ ವಿ.ರಾಮಸುಬ್ರಹ್ಮಣ್ಯಂ ನೇತೃತ್ವದ ಮೂವರ ಸದಸ್ಯರ ಪೀಠವು ತೀರ್ಪು ಕಾಯ್ದಿರಿಸಿದ್ದು, ಇಂದು ಪ್ರಕಟಗೊಳ್ಳಲಿದೆ.

ಹಥ್ರಾಸ್​ ಅತ್ಯಾಚಾರ ಪ್ರಕರಣದಲ್ಲಿ ಉತ್ತರ ಪ್ರದೇಶದಲ್ಲಿ ನ್ಯಾಯಸಮ್ಮತವಾದ ತನಿಖೆ ನಡೆಯಲು ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿ ಈ ಅರ್ಜಿಗಳು ಸಲ್ಲಿಕೆಯಾಗಿದ್ದವು. ಇದರ ಮಧ್ಯೆ ಸಂತ್ರಸ್ತೆ ಕುಟುಂಬದ ಪರ ವಾದ ಮಂಡನೆ ಮಾಡಿತ್ತಿರುವ ಲಾಯರ್​ ಕೂಡ ಪ್ರಕರಣವನ್ನ ದೆಹಲಿಗೆ ವರ್ಗಾವಣೆ ಮಾಡುವಂತೆ ಮನವಿ ಮಾಡಿದ್ದರು.

19 ವರ್ಷದ ಯುವತಿ ಮೇಲೆ ಸೆಪ್ಟೆಂಬರ್​ 14ರಂದು ಸಾಮೂಹಿಕ ಅತ್ಯಾಚಾರವೆಸಗಲಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಆಕೆ ಸೆ.29ರಂದು ದೆಹಲಿಯ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು. ಪ್ರಕರಣಕ್ಕೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

Last Updated : Oct 27, 2020, 3:44 PM IST

ABOUT THE AUTHOR

...view details