ವಿಶಾಖಪಟ್ಟಣಂ:ಎಲ್‌ಜಿ ಪಾಲಿಮರ್ನಿಂದ ಅನಿಲ ಸೋರಿಕೆಯಾದ ಪರಿಣಾಮ ಸುತ್ತಮುತ್ತಲಿನ ಹಳ್ಳಿಗಳ ಪರಿಸರದ ಮೇಲೆ ಅಧ್ಯಯನ ನಡೆಯುತ್ತಿದ್ದು, ಪ್ರಮುಖ ಜಲಾಶಯ ಸೇರಿದಂತೆ ವಿವಿಧ ಜಲಮೂಲಗಳಿಂದ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗಾಗಿ ಅಧಿಕಾರಿಗಳು ಕಳುಹಿಸಿದ್ದಾರೆ.
ರಾಸಾಯನಿಕ ಸ್ಥಾವರದಿಂದ ಸ್ಟೈರೀನ್ ಅನಿಲ ಸೋರಿಕೆಯಾದ ನಂತರ ಮೇ 7 ರಂದು 12 ಜನರು ಸಾವನ್ನಪ್ಪಿದ್ದರು. ನೂರಾರು ಜನರ ಜೀವನದ ಮೇಲೆ ಈ ಘಟನೆ ಕೆಟ್ಟ ಪರಿಣಾಮ ಬೀರಿತ್ತು. ಘಟನೆ ನಡೆದ ತಕ್ಷಣವೇ ಅಧಿಕಾರಿಗಳು ಬಂದರು ನಗರಕ್ಕೆ ನೀರು ಸರಬರಾಜಾಗುವ ನೀರಿನ ಮೂಲಗಳಲ್ಲಿ ಒಂದಾದ ಮೆಗಾಹ್ರಿಗೆಡ್ಡಾ ಜಲಾಶಯದಿಂದ ಕುಡಿಯುವ ನೀರಿನ ಸರಬರಾಜನ್ನು ನಿಲ್ಲಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ಮೇಘದ್ರೀಗೆಡ್ಡಾದಿಂದ ಸರಬರಾಜನ್ನು ತಕ್ಷಣವೇ ನಿಲ್ಲಿಸಲಾಗಿದೆ ಎಂದು ಗ್ರೇಟರ್ ವಿಶಾಖಪಟ್ಟಣಂ ಮಹಾನಗರ ಪಾಲಿಕೆ (ಜಿವಿಎಂಸಿ) ತಿಳಿಸಿದೆ.
ಸರಿಯಾದ ಪರೀಕ್ಷೆಗಳನ್ನು ಆಗುವವರೆಗೆ ಮೇಘದ್ರೀಗೆಡ್ಡಾದಿಂದ ನೀರನ್ನು ತೆಗೆಯಲಾಗುವುದಿಲ್ಲ ಎನ್ನಲಾಗಿತ್ತು. ಆದರೆ ಈ ನೀರು ಕುಡಿಯಲು ಸುರಕ್ಷಿತವಾಗಿದೆ ಎಂದು ಜಿವಿಎಂಸಿ ಆಯುಕ್ತ ಜಿ. ಸೃಜನಾ ಹೇಳಿದರು.