ನವದೆಹಲಿ:ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ತಾಯಿ ನಿಧನರಾಗಿದ್ದಾರೆ. ಇಂದು ಮುಂಜಾನೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಸಚಿವರು ಟ್ವಿಟರ್ ಮೂಲಕ ಮಾಹಿತಿ ನೀಡಿದ್ದಾರೆ. ಮೃತರಿಗೆ 89 ವರ್ಷ ವಯಸ್ಸಾಗಿತ್ತು.
ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ಗೆ ಮಾತೃ ವಿಯೋಗ, ಮೌಲಾನಾ ಆಜಾದ್ ಕಾಲೇಜಿಗೆ ದೇಹದಾನ
ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ ತಾಯಿ ವಿಧಿವಶರಾಗಿದ್ದು ಅವರ ಆಸೆಯಂತೆ ಅವರ ಕಣ್ಣುಗಳನ್ನ ದೆಹಲಿಯ AIIMS ಆಸ್ಪತ್ರೆಗೆ ದಾನ ಮಾಡಲಾಗಿದೆ.
ಅವರ ತಾಯಿಯ ಆಸೆಯಂತೆ ಅವರ ಕಣ್ಣುಗಳನ್ನು ದೆಹಲಿಯ AIIMS ಗೆ ದಾನ ಮಾಡಲಾಗಿದೆ. ಹಾಗೂ ಅವರ ದೇಹವನ್ನು ಮೌಲಾನಾ ಆಜಾದ್ ಮೆಡಿಕಲ್ ಕಾಲೇಜಿಗೆ ನೀಡಲಾಗಿದೆ. ಅವರ ದೇಹ ದಾನವು ಸಮಾಜಕ್ಕೆ ಸ್ಫೂರ್ತಿ ನೀಡುತ್ತದೆ "ಎಂದು ಅವರು ಹಿಂದಿಯಲ್ಲಿ ಮಾಡಿದ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಭೂಮಿಯ ಮೇಲಿನ ನನ್ನ ಪ್ರೀತಿಯ ವ್ಯಕ್ತಿ ನನ್ನ ತಾಯಿ ಸ್ವರ್ಗಕ್ಕೆ ತೆರಳಿದ್ದಾರೆ ಎಂದು ತಿಳಿಸಲು ನನ್ನ ಹೃದಯತುಂಬಿ ಬರುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ನನ್ನ ತಾಯಿಯದು ಅತ್ಯುನ್ನತ ವ್ಯಕ್ತಿತ್ವ, ಅವರು ನನ್ನ ಮಾರ್ಗದರ್ಶಿ ಮತ್ತು ದಾರ್ಶನಿಕರು, ಅವರ ಸ್ಥಾನವನ್ನು ನನ್ನ ಜೀವನದಲ್ಲಿ ಯಾರೂ ತುಂಬಲು ಸಾಧ್ಯವಿಲ್ಲ ಎಂದು ಬರೆದುಕೊಂಡಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಟ್ವೀಟ್ ಮಾಡಿದ್ದಾರೆ.