ಸೂರತ್:2002ರ ಗೋಧ್ರಾ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಮೊಕದ್ದಮೆಗಳಿಂದ ಪ್ರಧಾನಿ ನರೇಂದ್ರ ಮೋದಿಯ ಹೆಸರನ್ನು ಸ್ಥಳೀಯ ನ್ಯಾಯಾಲಯ ಕೈಬಿಟ್ಟಿದೆ.
ಗೋಧ್ರಾ ಹತ್ಯಾಕಾಂಡ: ಮೂರು ಮೊಕದ್ದಮೆಗಳಿಂದ ಪಿಎಂ ಮೋದಿ ಹೆಸರು ಕೈಬಿಟ್ಟ ಕೋರ್ಟ್ - ಗುಜರಾತ್ ಗಲಭೆ
2002ರ ಗುಜರಾತ್ ಗಲಭೆ ಬಳಿಕ ನಾಲ್ವರು ಬ್ರಿಟಿಷ್ ಪ್ರಜೆಗಳ ಹತ್ಯೆ ಪ್ರಕರಣದಲ್ಲಿ ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ವಿರುದ್ಧ ಮೃತರ ಸಂಬಂಧಿಕರು ಮೂರು ಸಿವಿಲ್ ಮೊಕದ್ದಮೆಗಳನ್ನು ದಾಖಲಿಸಿದ್ದರು. ಇದೀಗ ಗುಜರಾತ್‌ನ ಸಬರ್ಕಂತ ಜಿಲ್ಲೆಯ ಸ್ಥಳೀಯ ನ್ಯಾಯಾಲಯ ಮೊಕದ್ದಮೆಗಳಿಂದ ಪಿಎಂ ಮೋದಿ ಹೆಸರನ್ನು ಕೈಬಿಟ್ಟಿದೆ.
2002ರ ಗುಜರಾತ್ ಗಲಭೆ ಬಳಿಕ ನಾಲ್ವರು ಬ್ರಿಟಿಷ್ ಪ್ರಜೆಗಳ ಹತ್ಯೆ ಪ್ರಕರಣದಲ್ಲಿ ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿ ವಿರುದ್ಧ ಮೃತರ ಸಂಬಂಧಿಕರು ಮೂರು ಸಿವಿಲ್ ಮೊಕದ್ದಮೆಗಳನ್ನು ದಾಖಲಿಸಿದ್ದರು. ಈ ಸಂಬಂಧ ಮೋದಿ ಪರ ವಕೀಲರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಶನಿವಾರ ಗುಜರಾತ್‌ನ ಸಬರ್ಕಂತ ಜಿಲ್ಲೆಯ ಸ್ಥಳೀಯ ನ್ಯಾಯಾಲಯ ನಡೆಸಿತ್ತು.
ಮೋದಿಯ ವಿರುದ್ಧದ ಆರೋಪಗಳು ಸಾಮಾನ್ಯ, ನಿರ್ದಿಷ್ಟವಲ್ಲದ ಮತ್ತು ಅಸ್ಪಷ್ಟವಾಗಿದೆ. ಅಲ್ಲದೇ ಆಗಿನ ಗುಜರಾತ್ ಮುಖ್ಯಮಂತ್ರಿ ಮೋದಿಯವರು ಕೃತ್ಯ ನಡೆದ ಸ್ಥಳದಲ್ಲಿ ಹಾಜರಿದ್ದರು ಎಂಬುದಕ್ಕೆ ಯಾವುದೇ ಸಾಕ್ಷಿಗಳಿಲ್ಲ ಎಂದು ಹೇಳಿರುವ ಕೋರ್ಟ್, ಮೊಕದ್ದಮೆಗಳಿಂದ ಪ್ರಧಾನಿ ನರೇಂದ್ರ ಮೋದಿಯ ಹೆಸರನ್ನು ತೆಗೆದು ಹಾಕಿದೆ.