ಕರ್ನಾಟಕ

karnataka

ETV Bharat / bharat

ಟ್ರ್ಯಾಕ್ಟರ್​​ನಲ್ಲಿ ವಧು-ವರರ ಮೆರವಣಿಗೆ.. ರೈತರ ಪ್ರತಿಭಟನೆಗೆ ಸಾಥ್ ನೀಡಿದ ಸತಿಪತಿ.. - ಟ್ರ್ಯಾಕ್ಟರ್ ಏರಿ ಬಂದ ನವ ವಧು ವರರು

ಕಳೆದ ಹಲವು ದಿನಗಳಿಂದ ನಾನು ಗಾಜಿಪುರದ ಗಡಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದೇನೆ. ಸರ್ಕಾರವು ರೈತರ ಬಗ್ಗೆ ಕಾಳಜಿವಹಿಸುತ್ತಿಲ್ಲ. ಕೃಷಿ ಕಾನೂನುಗಳನ್ನೂ ಹಿಂಪಡೆದುಕೊಳ್ತಿಲ್ಲ..

ಟ್ರ್ಯಾಕ್ಟರ್​​ನಲ್ಲಿ ನವ ವಧು-ವರರ ಮೆರವಣಿಗೆ : ರೈತರ ಪ್ರತಿಭಟನೆಗೆ ಸಾಥ್
ಟ್ರ್ಯಾಕ್ಟರ್​​ನಲ್ಲಿ ನವ ವಧು-ವರರ ಮೆರವಣಿಗೆ : ರೈತರ ಪ್ರತಿಭಟನೆಗೆ ಸಾಥ್

By

Published : Feb 2, 2021, 5:18 PM IST

ಕಾಶಿಪುರ (ಉತ್ತರಾಖಂಡ) :ಸಾಮಾನ್ಯವಾಗಿ ಮದುವೆಗಳಲ್ಲಿ ಮಧುಮಕ್ಕಳು ಕಾರಲ್ಲಿ, ಬೈಕ್​ನಲ್ಲಿ, ಕುದುರೆ ಮೇಲೆ ಬರೋದನ್ನು ನೋಡಿದ್ದೀವಿ. ಆದರೆ, ಇಲ್ಲೊಂದು ಕಡೆ ನವ ಜೋಡಿ ಟ್ರ್ಯಾಕ್ಟರ್ ಏರಿ ಬಂದಿದೆ.

ದೆಹಲಿ ಗಡಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿ, ಕಾಶಿಪುರದಲ್ಲಿ ವಧುವರರು ಟ್ರ್ಯಾಕ್ಟರ್ ಏರಿ ಬಂದು ಜನರ ಗಮನ ಸೆಳೆದಿದ್ದಾರೆ. ಅಲ್ಲದೆ, ಈ ವಿಡಿಯೋ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಟ್ರ್ಯಾಕ್ಟರ್​​ನಲ್ಲಿ ನವ ವಧು-ವರರ ಮೆರವಣಿಗೆ.. ರೈತರ ಪ್ರತಿಭಟನೆಗೆ ಸಾಥ್..

ವಿವಿಧ ಬಗೆಯ ಹೂಗಳಿಂದ ಅಲಂಕರಿಸಿರುವ ಟ್ರ್ಯಾಕ್ಟರ್​ನಲ್ಲಿ ವರ ಶಿವಾಲ್​ಜಿತ್ ಸಿಂಗ್ ಹಾಗೂ ವಧು ಸಂದೀಪ್​ಕೌರ್ ರೈತ ಆಂದೋಲನಕ್ಕೆ ಬೆಂಬಲಿಸಿ ಧ್ವಜ ಹಿಡಿದು ಆಗಮಿಸಿದರು.

ಈ ವೇಳೆ ಮಾತನಾಡಿದ ವರ ಶಿವಾಲ್​ಜಿತ್ ಸಿಂಗ್, ಕಳೆದ ಹಲವು ದಿನಗಳಿಂದ ನಾನು ಗಾಜಿಪುರದ ಗಡಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದೇನೆ. ಸರ್ಕಾರವು ರೈತರ ಬಗ್ಗೆ ಕಾಳಜಿವಹಿಸುತ್ತಿಲ್ಲ. ಕೃಷಿ ಕಾನೂನುಗಳನ್ನೂ ಹಿಂಪಡೆದುಕೊಳ್ತಿಲ್ಲ ಎಂದು ಕಿಡಿಕಾರಿದರು.

ವಧು ಸಂದೀಪ್ ಕೌರ್ ಮಾತನಾಡಿ, ನಾನು ರೈತನ ಮಗಳು. ಕೇಂದ್ರ ಸರ್ಕಾರದ ಜಾರಿಗೊಳಿಸಿರುವ ಹೊಸ ಕಾಯ್ದೆಗಳನ್ನು ಹಿಂಪಡೆದುಕೊಳ್ಳಬೇಕು. ನನ್ನ ಪತಿ ಪ್ರತಿಭಟನೆಯಲ್ಲಿ ಭಾಗಿಯಾಗುತ್ತಾರೆ ಎಂದರು.

ABOUT THE AUTHOR

...view details