ನವದೆಹಲಿ: ಮಾರಣಾಂತಿಕ ಕೊರೊನಾ ವೈರಸ್ನಂತಹ ಝೋನೋಟಿಕ್ ಕಾಯಿಲೆಗಳು ಹೆಚ್ಚುತ್ತಿರುವ ಭಯದ ಹಿನ್ನೆಲೆಯಲ್ಲಿ ಪ್ರಾಣಿ ದಯಾ ಸಂಘಟನೆಯು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರನ್ನು ಆನೆಗಳಿಗೆ ಪ್ರದರ್ಶನ ಮತ್ತು ತರಬೇತಿ ನೀಡುವುದನ್ನು ನಿಷೇಧಿಸುವಂತೆ ಒತ್ತಾಯಿಸಿದೆ.
ಪ್ರಾಣಿ ದಯಾ ಸಂಘ (ಪೆಟಾ) ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಬಾಗಿಲು ಬಡಿದಿದ್ದು, ದೇಶದಲ್ಲಿ ಬಂಧಿತ ಆನೆಗಳು ಎದುರಿಸುತ್ತಿರುವ ಸನ್ನಿಹಿತ ಝೋನೋಟಿಕ್ ಕ್ಷಯರೋಗಕ್ಕೆ ಕಾರಣವಾಗಲಿದೆ. ಇದು ಸಾರ್ವಜನಿಕರ ಆರೋಗ್ಯಕ್ಕೆ ಅಪಾಯ ಉಂಟುಮಾಡಲಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದೆ.
ದೇಶದಲ್ಲಿನ ಆನೆಗಳಿಂದ ಮನುಷ್ಯರಿಗೆ ಕ್ಷಯರೋಗ ಹರಡಬಹುದು ಎಂಬುದು ಪತ್ತೆಯಾಗಿದೆ. ಅನೇಕ ಬಂಧಿತ ಆನೆಗಳು ಕ್ಷಯರೋಗದಿಂದ ಬಳಲುತ್ತವೆ. ಸೆರೆಯಾಳು ಆನೆಗಳನ್ನು ಜೈಪುರದ ಸಮೀಪದ ಅಮೆರ್ ಕೋಟೆಯಲ್ಲಿ ಸವಾರಿ ಮಾಡಲು ಬಳಸಲಾಗುತ್ತಿದೆ. ಸರ್ಕಸ್, ಚಲನಚಿತ್ರ, ಟಿವಿ ಕಾರ್ಯಕ್ರಮಗಳು, ಉತ್ಸವ, ಮೆರವಣಿಗೆಗಳಲ್ಲಿ ಬಳಸಿಕೊಳ್ಳುವುದರಿಂದ ಸಾರ್ವಜನಿಕರು ಅಪಾಯಕ್ಕೆ ಸಿಲುಕಿಸಬಹುದು ಎಂದು ಪೆಟಾ ಹೇಳಿದೆ.