ನವದೆಹಲಿ:ಈರುಳ್ಳಿ ಬೆಲೆಯಲ್ಲಿ ಗಣನೀಯ ಏರಿಕೆ ಕಂಡ ಹಿನ್ನೆಲೆಯಲ್ಲಿ ಅದಕ್ಕೆ ಕಡಿವಾಣ ಹಾಕುವುದಕ್ಕಾಗಿ ದಾಸ್ತಾನು ಸಂಗ್ರಹ ಮಿತಿಯನ್ನು ಡಿ.31 ವರೆಗೆ ವಿಸ್ತರಣೆ ಮಾಡಿ ಕೇಂದ್ರ ಸರ್ಕಾರವು ಆದೇಶ ಹೊರಡಿಸಿದೆ.
ಚಿಲ್ಲರೆ ವ್ಯಾಪಾರಿಗಳು ಈರುಳ್ಳಿಯನ್ನು ಕೇವಲ 2 ಟನ್ ವರೆಗೆ ಮಾತ್ರ ಸಂಗ್ರಹಿಸಬಹುದು. ಆದರೆ, ಸಗಟು ವ್ಯಾಪಾರಿಗಳು 25 ಟನ್ಗಳ ವರೆಗೆ ಸಂಗ್ರಹಿಸಿ ಇಡಲು ಅವಕಾಶವಿದೆ ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ಲೀನಾ ನಂದನ್ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಏರುತ್ತಿರುವ ಈರುಳ್ಳಿ ಬೆಲೆಯನ್ನು ನಿಯಂತ್ರಿಸಲು ಮತ್ತು ದೇಶೀಯ ಸರಕುಗಳ ಲಭ್ಯತೆ ಸುಧಾರಿಸಲು ಹಾಗೂ ಸ್ಥಳೀಯ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ತಣಿಸುವ ಸಲುವಾಗಿ ಕೇಂದ್ರ ಸರ್ಕಾರವು ಡಿಸೆಂಬರ್ 31 ರವರೆಗೆ ಚಿಲ್ಲರೆ ಮತ್ತು ಸಗಟು ವ್ಯಾಪಾರಿಗಳಿಗೆ ಸ್ಟಾಕ್ ಹೋಲ್ಡಿಂಗ್ (ದಾಸ್ತಾನು ಸಂಗ್ರಹ) ಮಿತಿಯನ್ನು ವಿಧಿಸಿದೆ ಎಂದು ಅವರು ತಿಳಿಸಿದ್ದಾರೆ.