ಕೊಚ್ಚಿ (ಕೇರಳ) :ದುಬೈನಿಂದ ಕಣ್ಣೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕನೊಬ್ಬನಿಂದ, ಕಳ್ಳತನದಿಂದ ದೇಶದೊಳಗೆ ತರಲಾಗಿದ್ದ ಸುಮಾರು 49 ಲಕ್ಷ ರೂಪಾಯಿ ಮೌಲ್ಯದ 974 ಗ್ರಾಂ ಚಿನ್ನವನ್ನು ವಿಮಾನಯಾನ ವಿಚಕ್ಷಣಾ ದಳ ಅಧಿಕಾರಿಗಳು ಶುಕ್ರವಾರ ವಶಪಡಿಸಿಕೊಂಡಿದ್ದಾರೆ.
ಯುಎಇಯ ಶಾರ್ಜಾದಿಂದ ಕಣ್ಣೂರು ವಿಮಾನ ನಿಲ್ದಾಣಕ್ಕೆ ಬಂದ ಪ್ರಯಾಣಿಕ ಗುದದ್ವಾರದಲ್ಲಿ ಚಿನ್ನದ ಮಾದರಿಯ ನಾಲ್ಕು ಕ್ಯಾಪ್ಸೂಲ್‌ಗಳನ್ನು ಇಟ್ಟುಕೊಂಡಿದ್ದ. ಇದನ್ನು ವಿಚಕ್ಷಣಾ ದಳದ ಅಧಿಕಾರಿಗಳು ಪತ್ತೆ ಹಚ್ಚಿ ರೂ. 49,08,960 ಮೌಲ್ಯದ 974 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ ಕೊಚ್ಚಿಯ ಕಸ್ಟಮ್ಸ್ ಕಮೀಷನರ್ ಕಚೇರಿ ಮಾಹಿತಿ ನೀಡಿದೆ.