ಪಣಜಿ: ಕೊರೊನಾ ಭೀತಿ ಚರ್ಚ್ಗಳನ್ನು ಕೂಡಾ ಕಾಡುತ್ತಿದೆ. ಇದರಿಂದಾಗಿ ಇಲ್ಲಿನ ಬಹುತೇಕ ಚರ್ಚ್ಗಳು ಪ್ರತಿ ಭಾನುವಾರ ನಡೆಯುವ ಸಾಮೂಹಿಕ ಪ್ರಾರ್ಥನೆಗಳನ್ನು ಟಿವಿಗಳಲ್ಲಿ ನೇರಪ್ರಸಾರ ಮಾಡಲು ಮುಂದಾಗಿವೆ. ಚರ್ಚ್ಗಳಿಗೆ ಪ್ರಾರ್ಥನೆ ಸಲ್ಲಿಸಲು ಬರುವವರು ಮನೆಯಲ್ಲಿಯೇ ಕುಳಿತು ಧಾರ್ಮಿಕ ಆಚರಣೆಗಳನ್ನು ವೀಕ್ಷಿಸಿ, ಪ್ರಾರ್ಥನೆ ಸಲ್ಲಿಸಬೇಕೆಂದು ಮನವಿ ಮಾಡಿಕೊಳ್ಳಲಾಗಿದೆ.
ಇನ್ಮುಂದೆ ಟಿವಿಗಳಲ್ಲಿ ನೇರ ಪ್ರಸಾರವಾಗುತ್ತೆ ಗೋವಾ ಚರ್ಚ್ಗಳಲ್ಲಿನ ಪ್ರಾರ್ಥನೆ - ಕೊರೊನಾ ಪರಿಣಾಮ
ಕೊರೊನಾ ಎಫೆಕ್ಟ್ ಎಲ್ಲಾ ಕ್ಷೇತ್ರಗಳಿಗೂ ವ್ಯಾಪಿಸಿಕೊಂಡಿದೆ. ಗೋವಾದ ಬಹುತೇಕ ಚರ್ಚ್ಗಳು ತಮ್ಮ ಧಾರ್ಮಿಕ ಸಂಪ್ರದಾಯಗಳ ಆಚರಣೆಗೆ ಪರ್ಯಾಯ ಮಾರ್ಗಗಳನ್ನು ಕಂಡುಕೊಂಡಿವೆ.
ಕೊರೊನಾ ಹರಡದಂತೆ ತಡೆಯುವ ಸಲುವಾಗಿ ಈ ರೀತಿಯ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪ್ರಾರ್ಥನೆಗಳು ನಿಲ್ಲದಂತೆ ತೆಗೆದುಕೊಂಡಿರುವ ಈ ಪರ್ಯಾಯ ಮಾರ್ಗದಿಂದ ಸೋಂಕು ಹರಡುವುದು ನಿಯಂತ್ರಣಕ್ಕೆ ಬರಲಿದೆ. ಈ ಮೂಲಕ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಗೋವಾ ಚರ್ಚೊಂದರ ಫಾದರ್ ಆಗಿರುವ ವಾಲ್ಟರ್ ದೆಸಾ ಸ್ಪಷ್ಟಪಡಿಸಿದ್ದಾರೆ.
ಚರ್ಚ್ಗಳಲ್ಲಿ ಆರ್ಚ್ಬಿಷಪ್ ರೆವರೆಂಡ್ ಫಿಲಿಪೆ ನೆರಿ ಫೆರಾವೋ ಅವರ ಮಾರ್ಗದರ್ಶನದಲ್ಲಿ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ. ಗೋವಾ ಚರ್ಚ್ಗಳ ಎಲ್ಲಾ ಸೇವೆಗಳನ್ನು ರದ್ದು ಮಾಡಲಾಗಿದೆ. ಲಾಕ್ಡೌನ್ ನಂತರ ಸರ್ಕಾರದ ಕ್ರಮಕ್ಕೆ ಅನುಗುಣವಾಗಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ವಾಲ್ಟರ್ ದೆಸಾ ಹೇಳಿದ್ದಾರೆ.