ಹೈದರಾಬಾದ್: ಜಗತ್ತಿನ 180 ದೇಶಗಳು ಮಾರಣಾಂತಿಕ ಕೊರೊನಾ ವೈರಸ್‌ನಿಂದ ಪೀಡಿತವಾಗಿವೆ. ಈ ಸೋಂಕು ಹರಡುವಿಕೆ ತಡೆಯಲು ಜಾಗತಿಕ ಹೋರಾಟದ ಸಾಮರ್ಥ್ಯ ಏರಿಕೆಯು ಅತ್ಯವಶ್ಯವಾಗಿದೆ.
ಸಾಂಕ್ರಾಮಿಕ ರೋಗವು ಒಂದು ಮಿಲಿಯನ್‌ಗಿಂತಲೂ ಹೆಚ್ಚು ಜನರಿಗೆ ಈಗಾಗಲೇ ತಗುಲಿದೆ. ಜಾಗತಿಕವಾಗಿ 64 ಸಾವಿರಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ. ಆದಾಗ್ಯೂ ಸಾಮಾಜಿಕ ಅಂತರ ಕಾಪಾಡುವಿಕೆಯ ಹೊರತುಪಡಿಸಿ ಅದರ ಶೀಘ್ರ ಹರಡುವಿಕೆಯನ್ನು ತಡೆಯಲು ಸರ್ಕಾರಗಳು ದೃಢವಾದ, ಸ್ಪಷ್ಟವಾದ ಮಾರ್ಗೋಪಾಯಗಳನ್ನು ಕಂಡುಕೊಳ್ಳಲಾಗಿಲ್ಲ.
ಅಪಾಯಗಳನ್ನು ಊಹಿಸಲು ಕಷ್ಟವಾದಾಗ ಜಾಗತಿಕ ಸಂಘಟಿತ ಹೋರಾಟ ಮುಖ್ಯವಾಗುತ್ತದೆ. ಇವುಗಳನ್ನು ಪ್ರತ್ಯೇಕವಾಗಿ ಪರೀಕ್ಷಿಸಲು ಸಾಧ್ಯವಿಲ್ಲ. ಬಹುಪದರದ ಸಮಸ್ಯೆಗೆ ಉತ್ತರ ನೀಡಲು ಸರ್ಕಾರಗಳು ವ್ಯವಸ್ಥಿತ ಕ್ರಮಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ. ಜಾಗತಿಕ ಅಪಾಯಗಳು, ಬಿಕ್ಕಟ್ಟಿನ ಸಂದರ್ಭದಲ್ಲಿ ಪ್ರತಿಕ್ರಿಯಿಸುವ ಸರ್ಕಾರಗಳ ಸಾಮರ್ಥ್ಯವನ್ನು ಸಹ ಇಂಥ ಪರಿಸ್ಥಿತಿಗಳು ಪರೀಕ್ಷಿಸುತ್ತವೆ.
ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸಲು ರಾಜ್ಯಗಳು ಸಾರ್ವಜನಿಕ ನಂಬಿಕೆಯನ್ನು ಸಮರ್ಥವಾಗಿ ಖಾತ್ರಿಪಡಿಸಿಕೊಳ್ಳಬೇಕು ಮತ್ತು ಸ್ಥಳೀಯ ಸಿದ್ಧತೆ ಮತ್ತು ಪ್ರತಿಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ಖಾಸಗಿ ವಲಯವು ಒಟ್ಟಾಗಿ ಕೆಲಸ ಮಾಡಲು ಪ್ರೋತ್ಸಾಹಿಸಬೇಕು. ಭ್ರಷ್ಟಾಚಾರ, ವ್ಯರ್ಥತೆ ಮತ್ತು ಪಾರದರ್ಶಕತೆಯ ಕಾವಲುಗಾರನಾಗಿ ನಾಗರಿಕ ಸಮಾಜಗಳು ಸಹ ಪ್ರಮುಖ ಪಾತ್ರವಹಿಸುತ್ತವೆ.
ಈ ಸಾಂಕ್ರಾಮಿಕ ರೋಗವನ್ನು ಕೇವಲ ಒಂದು ದೇಶ ಸೋಲಿಸಲು ಸಾಧ್ಯವಿಲ್ಲ. ಏಕೆಂದರೆ, ಅದು ಕೇವಲ ದೇಶಗಳ ಗಡಿಗಳಿಗೆ ಸೀಮಿತವಾಗಿಲ್ಲ. ಆದ್ದರಿಂದ ಸರ್ಕಾರಗಳು ತಮ್ಮ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುವ ಮೂಲಕ ಅದನ್ನು ತಡೆಯಬಹುದು. ವಿಶ್ವ ಆರ್ಥಿಕ ವೇದಿಕೆಯ ಕೋವಿಡ್ ಆ್ಯಕ್ಷನ್ ಪ್ಲಾಟ್‌ಫಾರ್ಮ್ ಜೀವನ ಮತ್ತು ಜೀವನೋಪಾಯಗಳನ್ನು ರಕ್ಷಿಸಲು ಮತ್ತು ಪ್ರಪಂಚದಾದ್ಯಂತ ಈ ಪ್ರಯತ್ನಗಳನ್ನು ಹೆಚ್ಚಿಸಲು ಮಧ್ಯಸ್ಥಗಾರರನ್ನು ಸಜ್ಜುಗೊಳಿಸುತ್ತಿದೆ.