ನವದೆಹಲಿ:ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಬಾಲಿವುಡ್ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಅತ್ಯಂತ ವಿವಾದಾತ್ಮಕ ಸಾವಿನ ತನಿಖೆಯನ್ನು ಕೇಂದ್ರ ತನಿಖಾ ದಳ (ಸಿಬಿಐ) ಪ್ರಾರಂಭಿಸಿದೆ. ತನಿಖೆ ಆರಂಭಿಸಿದ ದಿನದಿಂದಲೂ ಸಿಬಿಐ ಭಾರಿ ಸುದ್ದಿಗೆ ಗ್ರಾಸವಾಗಿದೆ.
ಆದರೆ, ತನಿಖಾ ಸಂಸ್ಥೆ ಸಿಬಿಐ ಕುರಿತಂತೆ ಸಮಾಜದಲ್ಲಿ ಪ್ರೀತಿ-ದ್ವೇಷದ ಎರಡೂ ಭಾವನೆಗಳನ್ನ ನಾವು ಕಾಣಬಹುದು. ಕಾನೂನಿನ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಿಬಿಐ ನಿಷ್ಪಕ್ಷಪಾತ ಮತ್ತು ವಸ್ತುನಿಷ್ಠವಾಗಿ ಕಾರ್ಯನಿರ್ವಹಿಸುವಲ್ಲಿ ವಿಫಲವಾಗಿದೆ ಎಂದು ಆಗಾಗ್ಗೆ ಟೀಕೆಗಳು ಕೇಳಿ ಬರುತ್ತಿರುತ್ತವೆ. ಆದರೂ, ಇದೇ ಸಮಯದಲ್ಲಿ ಪ್ರಭಾವಿ ವ್ಯಕ್ತಿಗಳ ತೀರಾ ಸಂಕೀರ್ಣ ಪ್ರಕರಣಗಳನ್ನ ಸಿಬಿಐ ತನಿಖೆಗೆ ವಹಿಸಬೇಕೆಂಬ ಜನರ ಬೇಡಿಕೆಯೂ ಕೇಳಿಬರುತ್ತದೆ.
ಈ ಕುರಿತಂತೆ 'ಈಟಿವಿ ಭಾರತ'ದ ಜೊತೆ ಮಾತನಾಡಿದ, ಸಿಬಿಐನ ಮಾಜಿ ಜಂಟಿ ನಿರ್ದೇಶಕ ಎನ್.ಕೆ. ಸಿಂಗ್ ಅವರು, "ರಾಷ್ಟ್ರೀಯ ತನಿಖಾ ಸಂಸ್ಥೆ ಸಿಬಿಐನಲ್ಲಿ ಸಾಕಷ್ಟು ಏರಿಳಿತಗಳು ಕಂಡು ಬಂದಿವೆ, 10 ವರ್ಷಗಳ ಕಾಲ ನಾನು ಸಿಬಿಐನಲ್ಲಿ ಸೇವೆ ಸಲ್ಲಿಸಿದ್ದೇನೆ. ಯಾವುದೇ ಸಂಸ್ಥೆಯು ಈ ಹಿಂದೆ ಇದ್ದಂತೆ ಇವತ್ತು ಇರುವುದಿಲ್ಲ. ಸಿಬಿಐ ವಿಷಯದಲ್ಲೂ ಹಾಗೆ. ತನಿಖಾ ಸಂಸ್ಥೆ. ಸಿಬಿಐ ಬಗ್ಗೆ ಜನರಿಗೆ ಸಾಕಷ್ಟು ವಿಶ್ವಾಸವಿದೆ, ಆದರೂ, ಕೆಲವೊಮ್ಮೆ ಅದು ಸರಿಯಾಗಿ ಕೆಲಸ ಮಾಡಲು ವಿಫಲವಾಗುತ್ತದೆ ಮತ್ತು ಕೆಲವೊಮ್ಮೆ ಅದು ಉತ್ತಮ ಕೆಲಸಕ್ಕಾಗಿ ಮನ್ನಣೆ ಪಡೆಯುತ್ತದೆ. ಸೇಂಟ್ ಕಿಟ್ಸ್ ಫೋರ್ಜರಿ ಪ್ರಕರಣ ಮತ್ತು ಅಂತಹ ಅನೇಕ ಭ್ರಷ್ಟಾಚಾರ ಪ್ರಕರಣಗಳು ಸೇರಿದಂತೆ ಎಲ್ಲಾ ರೀತಿಯ ಪ್ರಕರಣಗಳನ್ನು ನಾನು ನಿರ್ವಹಿಸಿದ್ದೇನೆ " ಎಂದು ಅವರು ಹೇಳುತ್ತಾರೆ.
1977 ರ ಅಕ್ಟೋಬರ್ 2 ರಂದು ಮಾಜಿ ಸಿಬಿಐ ಅಧಿಕಾರಿ, ಇಂದಿರಾ ಗಾಂಧಿಯನ್ನು ಬಂಧಿಸಿದ್ದರು. ಅದು ಭಾರತದ ಮಾಜಿ ಪ್ರಧಾನಿಯನ್ನು ಜೈಲಿಗೆ ಹೋಗುವಂತೆ ಮಾಡಿತು. ಇದಲ್ಲದೆ, "ಯಾವುದೇ ಪ್ರಕರಣಗಳನ್ನು ತನಿಖೆಗೆ ತೆಗೆದುಕೊಳ್ಳಲು ಸಿಬಿಐ ಈಗ ಅಸ್ತಿತ್ವದಲ್ಲಿರುವ ಸರ್ಕಾರದಿಂದ ಅನುಮತಿ ಪಡೆಯಬೇಕಾಗಿದೆ, ಆದರೆ, ಈ ಹಿಂದೆ ಆ ರೀತಿ ಇರಲಿಲ್ಲ; ಇದು ಸಿಬಿಐನ ಸ್ವತಂತ್ರ ಸ್ವಾಯತ್ತತೆಗೆ ಅಡ್ಡಗಾಲಾಗಿದೆ. ಆದರೂ ಜನರಿಗೆ ಸಿಬಿಐ ಬಗ್ಗೆ ಅಪಾರ ವಿಶ್ವಾಸವಿದೆ" ಎಂದು ಸಿಂಗ್ ಹೇಳುತ್ತಾರೆ.
ಸಿಬಿಐನ ಕಾರ್ಯ ವೈಖರಿಯಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪವು ತನಿಖೆಯ ದೃಷ್ಟಿಯಿಂದ ಅನುಕೂಲಕರವಲ್ಲ. ಸಿಬಿಐನ ಮೇಲ್ವಿಚಾರಣೆ, ಸಹಾಯ ಮತ್ತು ಹಣಕಾಸಿನ ನೆರವು ನೀಡುವ ಅಧಿಕಾರ ಸರ್ಕಾರಕ್ಕೆ ಇದ್ದರೂ, ಇತ್ತೀಚೆಗೆ ಸರ್ಕಾರಗಳು ಮಾಡಿರುವ ಯಾವುದೇ ಬದಲಾವಣೆಗಳು ದೇಶದ ಪ್ರಧಾನ ತನಿಖಾ ಸಂಸ್ಥೆಯ ಸ್ವತಂತ್ರ ಕಾರ್ಯನಿರ್ವಹಣೆಗೆ ಅನುಕೂಲಕರವಾಗಿಲ್ಲ ಎಂದು ಅವರು ಹೇಳುತ್ತಾರೆ.
ಭ್ರಷ್ಟಾಚಾರದಿಂದ ಕೊಲೆಯವರೆಗೆ, ಯಾವುದೇ ಪ್ರಕರಣವಿದ್ದರೂ ಕೇಂದ್ರೀಯ ತನಿಖಾ ದಳ(ಸಿಬಿಐ)ವು ಭಾರತದ ಜನರಿಗಾಗಿ ತನಿಖೆ ನಡೆಸಲು ಮುಂದಾಗುವ ಏಜೆನ್ಸಿಯಾಗಿದೆ. ಭಾರತದಲ್ಲಿ ದೇಶದ ಗಮನ ಸೆಳೆಯುವಂತಹ ಯಾವುದೇ ಪ್ರಾಮುಖ್ಯತೆ ಹೊಂದಿರುವ ಪ್ರಕೆರಣ ಇದ್ದಾಗಲೆಲ್ಲಾ, ಸಿಬಿಐ ಪ್ರೋಬ್ಗೆ ಬಣ್ಣ ಬರುತ್ತದೆ ಎಂಬುದನ್ನ ಯಾವಾಗಲೂ ಗಮನಿಸಬಹುದು.
ರಾಜಕಾರಣಿಗಳ ಅಥವಾ ಬಿಗ್-ಶಾಟ್ ಉದ್ಯಮಿಗಳ ಉನ್ನತ ಪ್ರಕರಣ ಅಥವಾ ಅತ್ಯಾಚಾರ, ಬ್ಯಾಂಕ್ ವಂಚನೆ ಪ್ರಕರಣ ಸೇರಿದಂತೆ ಇನ್ನಿತರೆ ಹತ್ತು ಹಲವು ವಲಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಸಿಬಿಐ ತನಿಖೆ ನಡೆಸಿದೆ. ಆದರೆ ಈ ಅಗಾಧ ಕಾರ್ಯಕ್ಷಮತೆಯನ್ನು ಹೊಂದಿರುವ ಸಿಬಿಐ ಇನ್ನೂ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಕಾರ್ಯನಿರ್ವಹಿಸಲು ಸಾಧ್ಯವಾಗಿಲ್ಲ. ಹೀಗಾಗಿ, ಈ ಕೆಲವು ಪ್ರಕರಣಗಳು ಇನ್ನೂ ಪರಿವಾಗದೇ ಹಾಗೆಯೇ ಉಳಿದಿವೆ.
ಸಿಬಿಐನ ಕಾರ್ಯವೈಖರಿಯಲ್ಲಿ ಉಂಟಾದ ಏರಿಳಿತಗಳನ್ನು ಒಮ್ಮೆ ನೋಡೋಣ.
ಸಿಬಿಐ ತನಿಖೆ ನಡೆಸಿದ ಕೆಲ ಸೆನ್ಸೇಶನಲ್ ಪ್ರಕರಣಗಳು:
ಸ್ಟರ್ಲಿಂಗ್ ಬಯೋಟೆಕ್ ಹಗರಣ
ಕುಖ್ಯಾತ ಸ್ಟರ್ಲಿಂಗ್ ಬಯೋಟೆಕ್ ಹಗರಣದಲ್ಲಿ, ವಡೋದರಾ ಮೂಲದ ಸ್ಟರ್ಲಿಂಗ್ ಬಯೋಟೆಕ್ ನಿರ್ದೇಶಕರಾದ ಚೇತನ್ ಸಂದೇಸರ ಮತ್ತು ಅವರ ಸಹೋದರ ಸಂದೇಸರ ಇಬ್ಬರು ಸೇರಿ ಅರ್ಧ ಡಜನ್ ಬ್ಯಾಂಕುಗಳಿಗೆ 5,700 ಕೋಟಿ ರೂ.ಗಳನ್ನು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ, ಸಿಬಿಐ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಪ್ರಮುಖ ಡೈರಿಗಳನ್ನು ಪತ್ತೆ ಹಚ್ಚಿದೆ. ಅದರಲ್ಲಿ, ಸ್ಟರ್ಲಿಂಗ್ ಬಯೋಟೆಕ್ ಸಂಸ್ಥೆ 2011 ರ ಜನವರಿ ಮತ್ತು ಜೂನ್ ವರೆಗೆ ಜನರು ಮತ್ತು ಸಂಸ್ಥೆಗಳು ಸೇರಿದಂತೆ ಯಾರ್ಯಾರಿಗೆ ಹಣ ಪಾವತಿಸಿದೆ ಎಂಬುದರ ವಿವರಗಳಿವೆ ಎಂದು ತಿಳಿದುಬಂದಿದೆ.
ವಿಜಯ್ ಮಲ್ಯ ಪ್ರಕರಣ: