ಪಾಟ್ನಾ:ಬಿಹಾರ ಸರ್ಕಾರವು ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಗೆ ತಂದರೆ ಅದು ಒಂದು ದೊಡ್ಡ ಫಲಪ್ರದವಾಗಲಿದೆ. ಸಿಎಂ ನಿತೀಶ್ ಕುಮಾರ್ ಅವರಿಗೆ ಇದರ ಅನುಷ್ಠಾನಕ್ಕೆ ನಾನು ಮನವಿ ಮಾಡುತ್ತೇನೆ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳಿದ್ದಾರೆ.
ಲವ್ ಜಿಹಾದ್‌ಗೆ ಕೋಮುವಾದಕ್ಕೂ ಯಾವುದೇ ಸಂಬಂಧವಿಲ್ಲ. ಬಿಹಾರದಲ್ಲಿ ಕಾನೂನು ಜಾರಿಗೆ ಬಂದರೆ ಅದು ಸಾಮಾಜಿಕ ಸಾಮರಸ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದರು.
ಲವ್ ಜಿಹಾದ್ ಹಿಂದೂ ಸಮುದಾಯದ ಮೇಲೆ ಮಾತ್ರ ಪರಿಣಾಮ ಬೀರುತ್ತಿಲ್ಲ. ಇದು ನಮ್ಮ ದೇಶದ ಅಲ್ಪಸಂಖ್ಯಾತ ಸಮುದಾಯಗಳ ಮೇಲೂ ಪರಿಣಾಮ ಬೀರುತ್ತಿದೆ. ಕೇರಳದಲ್ಲಿ ಕ್ರಿಶ್ಚಿಯನ್ನರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರು ಕೂಡ ಆತಂಕಕ್ಕೊಳಗಾಗಿ ಕಳವಳ ವ್ಯಕ್ತಪಡಿಸಿದ್ದಾರೆ. ಸಿರೋ-ಮಲಬಾರ್ ಚರ್ಚಿನ ಹೇಳಿಕೆಯಂತೆ ಕ್ರಿಶ್ಚಿಯನ್ ಹುಡುಗಿಯರನ್ನು ಸಹ ಗುರಿಯಾಗಿಸಿ ಹಲ್ಲೆ ಮಾಡಲಾಗುತ್ತಿದೆ ಎಂದು ಸಿಂಗ್ ಹೇಳಿದ್ದಾರೆ.
ಈ ಹಿಂದೆ ಮಧ್ಯಪ್ರದೇಶದ ಬಿಜೆಪಿ ಶಾಸಕ ರಾಮೇಶ್ವರ್ ಶರ್ಮಾ ಕೂಡ ಇಂತಹ ಕಾನೂನನ್ನು ಪ್ರತಿಪಾದಿಸಿದರು. ಲವ್ ಜಿಹಾದ್ ಅನ್ನು ಐಸಿಸ್ ಮತ್ತು ಪಾಕಿಸ್ತಾನದ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ ಪಿತೂರಿ ಎಂದು ಅವರು ಹೇಳಿದ್ದರು.