ಭೋಪಾಲ್ (ಮಧ್ಯಪ್ರದೇಶ) :ಮಧ್ಯಪ್ರದೇಶದ ಔರಂಗಾಬಾದ್ನಲ್ಲಿ ಗೂಡ್ಸ್ ರೈಲು ಹರಿದು ಹಳಿಯ ಮೇಲೆ ಮಲಗಿದ್ದ 16 ವಲಸೆ ಕಾರ್ಮಿಕರು ಮೃತಪಟ್ಟಿದ್ದಾರೆ. ಐದು ಮಂದಿ ಗಾಯಗೊಂಡಿದ್ದು, ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂಥವೇ ಕೆಲವು ಘಟನೆಗಳ ವಿವರ ಇಲ್ಲಿದೆ.
ಅಮೃತಸರ ದುರಂತ: ಪಂಜಾಬ್ನ ಅಮೃತಸರ ಬಳಿಯ ಜೋಡಾ ಫಟಕ್‌ನಲ್ಲಿ ಅಕ್ಟೋಬರ್ 19, 2018ರಂದು ಈ ರೈಲು ದುರಂತ ನಡೆಯಿತು. ದಸರಾ ಸಂಭ್ರಮದಲ್ಲಿ ರಾವಣನ ಪ್ರತಿಕೃತಿ ದಹಿಸುತ್ತಿದ್ದವರ ಮೇಲೆ ರೈಲು ಹರಿದು 62 ಮಂದಿ ಸಾವನ್ನಪ್ಪಿ 72 ಮಂದಿ ಗಾಯಗೊಂಡಿದ್ದರು.
ಧಮರಾ ಘಾಟ್ ದುರಂತ:19 ಆಗಸ್ಟ್ 2013ರಲ್ಲಿ ಬಿಹಾರದ ಖಗರಿಯಾ ಧಮರಾಘಾಟ್ನಲ್ಲಿ ರೈಲು ದುರಂತ ನಡೆದಿದ್ದು, ಕನ್ವಾರಾ ಭಕ್ತರ ಎಕ್ಸ್ಪ್ರೆಸ್ ರೈಲು ಹರಿದು 37 ಮಂದಿ ಸಾವನ್ನಪ್ಪಿದ್ದರು.
ವಿಜಿನಗರಂ ರೈಲ್ವೆ ದುರಂತ: ಆಂಧ್ರಪ್ರದೇಶದ ವಿಜಿನಗರಂ ಬಳಿ ವೇಗವಾಗಿ ಬಂದ ರೈಲೊಂದು ಹರಿದ ಪರಿಣಾಮ 10 ಮಂದಿ ಸಾವನ್ನಪ್ಪಿದ್ದರು. ಅಲೆಪ್ಪಿಯಿಂದ- ಧನ್ಬಾದ್ಗೆ ತೆರಳುತ್ತಿದ್ದ ಬೊಕಾರೋ ಎಕ್ಸ್ಪ್ರೆಸ್ನ ಕಂಪಾರ್ಟ್ಮೆಂಟ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ವದಂತಿಯಿಂದ ಚೈನ್ ಎಳೆದು ಕೆಳಗೆ ಜಿಗಿದಿದ್ದ ಪ್ರಯಾಣಿಕರ ಮೇಲೆ ರಾಯಗಢ, ವಿಜಯವಾಡ ಪ್ಯಾಸೆಂಜರ್ ಟ್ರೇನ್ ಹರಿದಿತ್ತು.
ಇಟವಾ ದುರಂತ:ಉತ್ತರ ಪ್ರದೇಶದ ಇಟವಾದಲ್ಲಿ 2019ರ ಜೂನ್ 10ರಂದು ರಾಜಧಾನಿ ಎಕ್ಸ್ಪ್ರೆಸ್ ಹರಿದ ಪರಿಣಾಮ 4 ಮಂದಿ ಸಾವನ್ನಪ್ಪಿದ್ದರು.
ಹರ್ಡೋಯಿ ದುರಂತ:ಉತ್ತರ ಪ್ರದೇಶದ ಹರ್ಡೋಯಿ ಜಿಲ್ಲೆಯಲ್ಲಿ 2018ರ ನವೆಂಬರ್ 5ರಂದು ಈ ಘಟನೆ ನಡೆದಿತ್ತು. ರೈಲ್ವೆ ಲೇನ್ನಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಗ್ಯಾಂಗ್ಮನ್ಗಳ ಮೇಲೆ ಅಜಾಗಕರೂಕತೆಯ ಕಾರಣಕ್ಕೆ ರೈಲು ಹರಿದು ಅವರೆಲ್ಲರೂ ಸಾವನ್ನಪ್ಪಿದ್ದರು
ಕೈಮಿರ್ ದುರಂತ:ಬಿಹಾರದ ಕೈಮಿರ್ ಜಿಲ್ಲೆಯಲ್ಲಿ 13 ಅಕ್ಟೋಬರ್ 2018ರಂದು ಹಳಿ ದಾಟುವ ವೇಳೆ ರೈಲು ಹರಿದು ಐದು ಮಂದಿ ಮೃತಪಟ್ಟಿದ್ದರು.