ಇಂದೋರ್:ದಶಕಗಳ ಹಿಂದೆ ಆಕಸ್ಮಿಕವಾಗಿ ಗಡಿ ದಾಟಿ ಪಾಕಿಸ್ತಾನ ಸೇರಿದ್ದ ಭಾರತದ ಕಿವುಡ ಮತ್ತು ಮೂಗ ಯುವತಿ ಗೀತಾ ಎಂಬಾಕೆಯನ್ನು 15 ವರ್ಷಗಳ ಬಳಿಕ ಸ್ವದೇಶಕ್ಕೆ ಕರೆಸುವಲ್ಲಿ ಸುಷ್ಮಾ ಯಶಸ್ವಿಯಾಗಿದ್ದರು. ಆಕೆಗೆ ಅವರು ತಾಯಿ ಪ್ರೀತಿ ತೋರಿ, ಆಕೆ ಜೀವನಕ್ಕೂ ಸುಷ್ಮಾ ಸಾಕಷ್ಟು ನೆರವಾಗಿದ್ದರು. ಇದೀಗ ಸುಷ್ಮಾ ಸ್ವರಾಜ್ ವಿಧಿವಶರಾಗಿದ್ದು, ಇದೀಗ ವಿಶೇಷವಾಗಿ ಗೌರವ ಸಲ್ಲಿಕೆ ಮಾಡಿದ್ದಾರೆ.
ಸುಷ್ಮಾ ಸ್ವರಾಜ್ ವಿಧಿವಶ ... ವಿಶೇಷ ಗೌರವ ಸಲ್ಲಿಕೆ ಮಾಡಿದ ಗೀತಾ!
ಕೇಂದ್ರ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ವಿಧಿವಶರಾಗಿದ್ದು, 2015ರಲ್ಲಿ ಪಾಕಿಸ್ತಾನದಿಂದ ಬಿಡುಗಡೆಗೊಂಡು ಭಾರತಕ್ಕೆ ಆಗಮಿಸಿರುವ ಗೀತಾ ವಿಶೇಷ ಗೌರವ ಸಲ್ಲಿಕೆ ಮಾಡಿದ್ದಾರೆ.
ಕೇಂದ್ರದ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ನಿಧನರಾಗಿರುವ ಸುದ್ದಿ ಕೇಳುತ್ತಿದ್ದಂತೆ ಕಣ್ಣೀರು ಹಾಕಿರುವ ಗೀತಾ, ಇದೀಗ ಅವರಿಗೆ ವಿಶೇಷ ಗೌರವ ಸಲ್ಲಿಕೆ ಮಾಡಿದ್ದಾರೆ. ಸದ್ಯ ಮಧ್ಯಪ್ರದೇಶದ ಇಂದೋರ್ನಲ್ಲಿ ಹಾಸ್ಟೆಲ್ನಲ್ಲಿ ಗೀತಾ ವಾಸವಾಗಿದ್ದು, ಅಲ್ಲಿಂದಲೇ ಅಗಲಿರುವ ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಕೈ ಸನ್ನೆ ಮೂಲಕ ವಿಶೇಷ ಗೌರವ ಸಲ್ಲಿಸಿದ್ದಾರೆ.
ತನ್ನ 7-8ನೇ ವಯಸ್ಸಿನಲ್ಲಿ ಸಂಜೋತಾ ಎಕ್ಸ್ಪ್ರೆಸ್ನಲ್ಲಿ ಒಬ್ಬಳೇ ಲಾಹೋರ್ಗೆ ಪ್ರಯಾಣ ಬೆಳೆಸಿದ್ದ ಗೀತಾ ಅಲ್ಲಿನ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡಿದ್ದಳು. 2015ರಲ್ಲಿ ಆಕೆಯನ್ನ ಭಾರತಕ್ಕೆ ಕರೆತರುವಲ್ಲಿ ಸುಷ್ಮಾ ಸ್ವರಾಜ್ ಯಶಸ್ವಿಯಾಗಿದ್ದರು. ಹಾಗೆಯೇ ಅವರ ತಂದೆ-ತಾಯಿ ಸಿಗದ ಕಾರಣ, ಕೇಂದ್ರ ಸರ್ಕಾರವೇ ಆಕೆಯ ಶಿಕ್ಷಣದ ವೆಚ್ಚ ಭರಿಸುತ್ತಿದೆ.