ನವದೆಹಲಿ:ಟೀಂ ಇಂಡಿಯಾ ಮಾಜಿ ಕ್ರಿಕೆಟರ್, ಬಿಜೆಪಿ ಸಂಸದ ಗೌತಮ್ ಗಂಭೀರ್ ಮನೆಯಲ್ಲಿ ಕೊರೊನಾ ಪ್ರಕರಣ ಕಾಣಿಸಿಕೊಂಡಿದ್ದು, ಅವರು ಕೂಡ ಸೆಲ್ಫ್ ಐಸೋಲೇಷನ್ಗೊಳಗಾಗಿದ್ದಾರೆ.
ಗಂಭೀರ್ ಮನೆಯಲ್ಲಿ ಕೊರೊನಾ ಕೇಸ್... ಸೆಲ್ಫ್ ಐಸೋಲೇಷನ್ಗೊಳಗಾದ ಸಂಸದ!
ಭಾರತೀಯ ಜನತಾ ಪಾರ್ಟಿ ಸಂಸದ ಗೌತಮ್ ಗಂಭೀರ್ ಮನೆಯಲ್ಲಿ ಕೋವಿಡ್ ಕೇಸ್ ಕಾಣಿಸಿಕೊಂಡಿದ್ದು, ಇದೀಗ ಅವರು ಕೂಡ ಹೋಂ ಕ್ವಾರಂಟೈನ್ಗೊಳಗಾಗಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಗಂಭೀರ್, ಮನೆಯಲ್ಲಿ ಕೋವಿಡ್ ಕೇಸ್ ಕಾಣಿಸಿಕೊಂಡಿರುವ ಕಾರಣ ತಾವು ಸೆಲ್ಫ್ ಐಸೋಲೇಷನ್ಗೊಳಗಾಗಿದ್ದಾಗಿ ಹೇಳಿಕೊಂಡಿದ್ದಾರೆ. ಜತೆಗೆ ಕೊರೊನಾ ಪರೀಕ್ಷೆಯ ವರದಿಗೋಸ್ಕರ ಕಾಯುತ್ತಿರುವುದಾಗಿ ಹೇಳಿದ್ದಾರೆ. ಇದೇ ವೇಳೆ, ಸರ್ಕಾರ ಜಾರಿಗೊಳಿಸಿರುವ ಎಲ್ಲ ಮಾರ್ಗಸೂಚಿ ಅನುಸರಿಸುವಂತೆ ಅವರು ಮನವಿ ಮಾಡಿದ್ದು, ಯಾವುದನ್ನೂ ಲಘುವಾಗಿ ತೆಗೆದುಕೊಳ್ಳಬೇಡಿ ಎಂದಿದ್ದಾರೆ.
ಭಾರತದಲ್ಲಿ ಈಗಾಗಲೇ 84 ಲಕ್ಷ ಕೋವಿಡ್ ಕೇಸ್ಗಳಿದ್ದು, ಅದರಲ್ಲಿ 5,20,773 ಸಕ್ರೀಯ ಪ್ರಕರಣಗಳಿವೆ. ದೇಶದಲ್ಲಿ ಇಲ್ಲಿಯವರೆಗೆ 11,54,29,095 ಸ್ಯಾಂಪಲ್ ಪರೀಕ್ಷೆ ಮಾಡಲಾಗಿದೆ.