ಅಹಮದಾಬಾದ್ :ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಸಹಾಯಕ ಮತ್ತು ವಿವಿಧ ಅಪರಾಧ ಪ್ರಕರಣಗಳ ಆರೋಪಿಯನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಶನಿವಾರ ಬಂಧಿಸಿದೆ.
ಭೂಗತ ಪಾತಕಿ ದಾವೂದ್ ಸಹಾಯಕನನ್ನು ಬಂಧಿಸಿದ ಗುಜರಾತ್ ಎಟಿಎಸ್ ಪೊಲೀಸರು - ವಿವಿಧ ಪ್ರಕರಣಗ ಆರೋಪಿ ಬಾಬು ಸೋಲಂಕಿ ಬಂಧನ
ವಿವಿಧ ಅಪರಾಧ ಪ್ರಕರಣಗಳ ಆರೋಪಿ ಮತ್ತು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಾಯಕ ಬಾಬು ಸೋಲಂಕಿ ಎಂಬಾತನನ್ನು ಗುಜರಾತ್ ಎಟಿಎಸ್ ಪೊಲೀಸರು ಬಂಧಿಸಿದ್ದಾರೆ.
ಬಾಬು ಸೋಲಂಕಿ ಬಂಧಿತ ಆರೋಪಿ. ದರೋಡೆ, ಕೊಲೆ ಯತ್ನ ಮತ್ತು ಸುಲಿಗೆ ಆರೋಪಗಳು ಈತನ ಮೇಲಿದೆ. ಮೆಹ್ಸಾನಾ ಕಡೆಗೆ ಸಾಗುತ್ತಿರುವಾಗ ಗಾಂಧಿನಗರದ ಅದಾಲಾಜ್ ಬಳಿ ಎಟಿಎಸ್ ಬಂಧಿಸಿದೆ.
ಸೋಲಂಕಿ ದರೋಡೆಕೋರ ಶರೀಫ್ ಖಾನ್ ಎಂಬಾತನಿಗಾಗಿ ಕೆಲಸ ಮಾಡುತ್ತಿದ್ದ, ಜೊತೆಗೆ ಭೂಗತ ಪಾತಕಿ ದಾವೂದ್ ಸಹಾಯಕನಾಗಿದ್ದ. ಮೆಹ್ಸಾನಾದ ಉನ್ಜಾ ಬಳಿಯ ಆಸ್ಟಾಕ್ ಮಾರುಕಟ್ಟೆಯ ವ್ಯಾಪಾರಿ ಪರವಾಗಿ ಅಹಮದಾಬಾದ್ ಮೂಲದ ಇಬ್ಬರು ಉದ್ಯಮಿಗಳಿಂದ 10 ಕೋಟಿ ರೂ. ಸುಲಿಗೆ ಮಾಡಲು ಯತ್ನಿಸಿದ ಆರೋಪ ಈತನ ತಂಡದ ಮೇಲಿದೆ. ಸದ್ಯ ಮುಂಬೈಯಲ್ಲಿ ಅಂಗ ರಕ್ಷನಾಗಿ ಕೆಲಸ ಮಾಡುತ್ತಿದ್ದ ಸೋಲಂಕಿ, . 1999 ರಿಂದ 2019 ರ ನಡುವೆ ಮುಂಬೈ, ಸೂರತ್, ಪಟಾನ್ ಜಿಲ್ಲೆಯ ಸಿಧ್‌ಪುರ ಮತ್ತು ಅಹಮದಾಬಾದ್‌ನಲ್ಲಿ ದರೋಡೆ, ಕೊಲೆ ಮತ್ತು ಸುಲಿಗೆ ಸೇರಿದಂತೆ ನಾಲ್ಕು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಎಟಿಎಸ್ ತಿಳಿಸಿದೆ.