ಪೂರ್ವ ಗೋದಾವರಿ(ಆಂಧ್ರಪ್ರದೇಶ): ಇಲ್ಲಿನ ಪೂರ್ವ ಗೋದಾವರಿ ಜಿಲ್ಲೆಯಲ್ಲಿ 50ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಮೂರು ಮಂದಿ ಅತ್ಯಾಚಾರವೆಸಗಿರುವುದಾಗಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಆಂಧ್ರಪ್ರದೇಶದಲ್ಲಿ ಹೇಯ ಕೃತ್ಯ... ವಿಧವೆ ಮೇಲೆ ಸಾಮೂಹಿಕ ಅತ್ಯಾಚಾರ, ಕೊಲೆ - ಹತ್ಯಾಚಾರವೆಸಗಿ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ
ದೇಶಾದ್ಯಂತ ಆತಂಕ ಸೃಷ್ಟಿಸಿದ್ದ ಹೈದ್ರಾಬಾದ್ ವೈದ್ಯೆ ಮೇಲಿನ ದುಷ್ಕೃತ್ಯದ ತನಿಖೆ ಪ್ರಗತಿಯಲ್ಲಿರುವಾಗಲೇ ಆಂಧ್ರಪ್ರದೇಶದಲ್ಲಿ ಪೈಶಾಚಿಕ ಘಟನೆ ಬೆಳಕಿಗೆ ಬಂದಿದೆ.
ಕೃತ್ಯವೆಸಗಿರುವವರಲ್ಲಿ ಸದ್ಯ ಓರ್ವ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಉಳಿದಿಬ್ಬರಿಗಾಗಿ ಬಲೆ ಬೀಸಿರುವುದಾಗಿ ಎಸ್ಪಿ ತಿಳಿಸಿದ್ದಾರೆ. ಮೃತ ಮಹಿಳೆಯ ಪತಿ ಹಾಗೂ ಮಗ ಈ ಹಿಂದೆ ಸಾವನ್ನಪ್ಪಿದ್ದರು. ಮಗಳು ಹೈದರಾಬಾದ್ನಲ್ಲಿ ವಾಸವಿದ್ದಾರೆ. ಘಟನೆ ನಡೆದಾಗ ಮನೆಯಲ್ಲಿ ಆಕೆ ಒಬ್ಬರೇ ಇದ್ದರು ಎನ್ನಲಾಗ್ತಿದೆ.
ಮೃತ ಮಹಿಳೆಯ ಮನೆಯ ಆವರಣದಲ್ಲಿ ಖಾರದಪುಡಿ ಚೆಲ್ಲಾಡಿರುವುದನ್ನು ಪೊಲೀಸರು ಗುರುತಿಸಿದ್ದಾರೆ. ಕೇಸನ್ನು ಆದಷ್ಟು ಬೇಗ ಭೇದಿಸುವುದಾಗಿ ಎಸ್ಪಿ ತಿಳಿಸಿದ್ದಾರೆ. ಸಿಕ್ಕಿಬಿದ್ದಿರುವ ಓರ್ವ ಆರೋಪಿ ನಾಗಬಾಬುನನ್ನು ಘಟನಾ ಸ್ಥಳಕ್ಕೆ ಪೊಲೀಸರು ಕರೆತಂದಾಗ ಸ್ಥಳೀಯರು ಆತನ ಮೇಲೆ ಹಲ್ಲೆ ನಡೆಸಿದ್ದರು. ಕೂಡಲೇ ಅವನನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.
TAGGED:
ಆಂಧ್ರಪ್ರದೇಶದಲ್ಲಿ ದಾರುಣ ಘಟನೆ