ನವದೆಹಲಿ:ಗಾಂಧೀಜಿ ಶಾಂತಿಯ ಪ್ರತಿಪಾದಕ.. ವ್ಯಾಪಾರಕ್ಕೆ ಬಂದ ಬ್ರಿಟಿಷರು ಆಳ್ವಿಕೆ ಆರಂಭಿಸಿದಾಗ ಭಾರತ ಸೂಕ್ತ ನಾಯಕತ್ವದ ಕೊರತೆಯಿಂದ ಅಸಹಾಯಕವಾಗಿತ್ತು. ಆಳ್ವಿಕೆ ಆರಂಭಿಸಿದ ಕೆಂಪು ಮೂತಿಯವರನ್ನು ಶಾಂತಿಯ ನಡೆಯಿಂದಲೇ ಗೆದ್ದು ವಿಶ್ವಕ್ಕೇ ಶಾಂತಿ ಸಾರಿದ ಗಾಂಧಿ ಕೋಮು ಸೌಹಾರ್ದತೆಗೆ ಹೆಚ್ಚಿನ ಮನ್ನಣೆ ನೀಡಿದ್ದರು. ದೇಶದ ಒಟ್ಟಾರೆ ಅಭಿವೃದ್ಧಿಗೆ ಸಮನ್ವಯ ಬದುಕು ಅಗತ್ಯ ಎನ್ನುವ ಪಾಲಿಸಿ ಗಾಂಧೀಜಿಯವರದ್ದಾಗಿತ್ತು.
ಗಾಂಧೀಜಿ ಕ್ರೈಸ್ತ ಧರ್ಮವನ್ನು ನಿಖರವಾಗಿ ಓದಿ ತಿಳಿದುಕೊಂಡಿರಲಿಲ್ಲ. ಒಂದು ಬಾರಿ ಇಂಗ್ಲೆಂಡ್ಗೆ ಪ್ರಯಾಣ ಬೆಳೆಸಿದ ಮೋಹನ್ ದಾಸ್ ಕರಮಚಂದ ಗಾಂಧಿ ಅವರಿಗೆ ಆ ವೇಳೆ ಬೈಬಲ್ ಓದುವ ಅವಕಾಶ ಒದಗಿ ಬಂದಿತ್ತು. ಕ್ರಿಶ್ಚಿಯನ್ನರ ಧರ್ಮ ಗ್ರಂಥ ಓದುತ್ತಾ ಓದುತ್ತಾ ಆ ಧರ್ಮದ ಬಗೆಗಿನ ಗಾಂಧೀಜಿ ನಿಲುವು ಸಂಪೂರ್ಣ ಬದಲಾಗಿತ್ತು. ಅದರಲ್ಲೂ ಎದುರಾಳಿ ಒಂದು ಏಟು ಹೊಡೆದರೆ ಮತ್ತೊಂದು ಕೆನ್ನೆಯನ್ನು ತೋರಿಸು ಎನ್ನುವ ಸಾಲು ಗಾಂಧೀಜಿಯವರನ್ನು ಆಕರ್ಷಿಸಿತ್ತು.