ನವದೆಹಲಿ: ಕೊರೊನಾ ವೈರಸ್ ತಡೆಕಟ್ಟುವ ಕುರಿತಂತೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚಿಸುವ ಸಲುವಾಗಿ ನಾಳೆ ನಡೆಯಲಿರುವ ಜಿ-20 ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿಯಾಗಲಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯುವ ಈ ಸಮ್ಮೇಳನದಲ್ಲಿ ಕೊರೊನಾ ವಿರುದ್ಧದ ಕಾರ್ಯಯೋಜನೆ ರೂಪುಗೊಳ್ಳಲಿದೆ.
ನಾಳೆ ಕೊರೊನಾ ವಿರುದ್ಧ ಜಿ20 ಸಮ್ಮೇಳನ: ವಿಡಿಯೋ ಕಾನ್ಫರೆನ್ಸ್ನಲ್ಲಿ ಮೋದಿ ಭಾಗಿ - ಜಿ20
ಜಾಗತಿಕ ಮಟ್ಟದಲ್ಲಿ ಕೊರೊನಾ ವಿರುದ್ಧ ರಾಷ್ಟ್ರಗಳು ಸಮರ ಸಾರುತ್ತಿವೆ. ನಾಳೆ ವಿಡಿಯೋ ಕಾನ್ಫರೆನ್ಸ್ ಮೂಲಕ ಜಿ20 ಸಮ್ಮೇಳನ ನಡೆಯಲಿದ್ದು ಕೊರೊನಾ ವಿರುದ್ಧದ ಕಾರ್ಯ ಯೋಜನೆ ಸಿದ್ಧಪಡಿಸಲು ಜಿ20 ಒಕ್ಕೂಟದ ರಾಷ್ಟ್ರಗಳು ಸಿದ್ಧವಾಗಿವೆ.
ಪ್ರಧಾನಮಂತ್ರಿ ನರೇಂದ್ರ ಮೋದಿ
ಈ ಸಮ್ಮೇಳನಕ್ಕೆ ಸೌದಿ ಅರೇಬಿಯಾದ ದೊರೆ ಸಲ್ಮಾನ್ ಬಿನ್ ಅಬ್ದುಲಾಜೀಜ್ ಅಲ್ ಸೌದ್ ಅಧ್ಯಕ್ಷತೆ ವಹಿಸಲಿದ್ದಾರೆ. ಜಗತ್ತಿಗೆ ಮಹಾಮಾರಿಯಾಗಿ ಕಾಡುತ್ತಿರುವ ಕೋವಿಡ್-19 ತಡೆಯಲು ಜಾಗತಿಕ ಪ್ರತಿಕ್ರಿಯೆಯನ್ನು ಈ ಸಮ್ಮೇಳದಲ್ಲಿ ನಿರೀಕ್ಷೆ ಮಾಡಲಾಗಿದೆ.
ಹಿಂದಿನ ವಾರ ಪ್ರಧಾನಿ ಮೋದಿ ಸೌದಿಯ ರಾಜಕುಮಾರನ ಜೊತೆ ವಿಶ್ವದ ಅಭಿವೃದ್ಧಿ ಹೊಂದಿದ ದೇಶಗಳ ಆರ್ಥಿಕತೆ ಹಾಗೂ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಆರ್ಥಿಕತೆ ಬಗ್ಗೆ ದೂರವಾಣಿ ಚರ್ಚೆ ನಡೆಸಿದ್ದರು. ಈಗ ಕೊರೊನಾ ವಿಚಾರದಲ್ಲಿ ಮತ್ತೆ ಜಿ20 ಶೃಂಗಸಭೆಯಲ್ಲಿ ಮಾತುಕತೆ ನಡೆಸಲಿದ್ದಾರೆ.