ಕಡಪ: ಕಾರ್ ಚೇಸ್ ಮಾಡಲು ಹೋಗಿ ರಕ್ತ ಚಂದನವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಸ್ಕಾರ್ಪಿಯೊ ಕಾರು ಟಿಪ್ಪರ್ಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸಜೀವ ದಹನವಾಗಿರುವ ಘಟನೆ ನಗರದ ಏರ್ಪೋರ್ಟ್ ಬಳಿ ನಡೆದಿದೆ.
ತಮಿಳುನಾಡಿನಿಂದ ಅಕ್ರಮವಾಗಿ ರಕ್ತ ಚಂದನವನ್ನು ಸಾಗಿಸುತ್ತಿದ್ದ ಕಾರು ಕಡಪದ ವಿಮಾನ ನಿಲ್ದಾಣದ ಬಳಿ ಮತ್ತೊಂದು ಕಾರ್ನ್ನು ಚೇಸ್ ಮಾಡಿ ಹಿಂದಕ್ಕೆ ಹಾಕಲು ಯತ್ನಿಸುತ್ತಿತ್ತು. ಈ ವೇಳೆ ಕಾರು ಮತ್ತು ವಾಹನಗಳು ಎದರಿಗೆ ಬಂದ ಟಿಪ್ಪರ್ ವಾಹನದ ಡೀಸೆಲ್ ಟ್ಯಾಂಕ್ಗೆ ಗುದ್ದಿದೆ. ಗುದ್ದಿದ ರಭಸಕ್ಕೆ ಎರಡು ಕಾರು ಮತ್ತು ಟಿಪ್ಪರ್ಗೆ ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ದೌಡಾಯಿಸಿ ಬೆಂಕಿಯನ್ನು ನಂದಿಸಿತು.