ಹೈದರಾಬಾದ್: ನಾಗಮಣಿ ಕಲ್ಲು ಮತ್ತು ಪಂಚಲೋಹದ ದುರ್ಗಾ ದೇವಿ ವಿಗ್ರಹವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಗ್ಯಾಂಗ್ನ್ನು ಹೈದರಾಬಾದ್ ಟಾಸ್ಕ್ ಫೋರ್ಸ್ ತಂಡ ಸೆರೆ ಹಿಡಿದಿದೆ.
ನಾಗಮಣಿ ಕಲ್ಲು, ಪಂಚಲೋಹ ದುರ್ಗದೇವಿ ವಿಗ್ರಹ ಮಾರಾಟ ಮಾಡಲು ಯತ್ನ ನಾಗಮಣಿ ಶುಭ ವಸ್ತು. ಇದನ್ನು 'ಪಂಚಲೋಹಾ' ದುರ್ಗಾ ದೇವಿಯ ವಿಗ್ರಹದೊಂದಿಗೆ ಪೂಜಿಸಿದರೆ ವ್ಯವಹಾರದಲ್ಲಿ ಭಾರಿ ಲಾಭ ಲಭ್ಯವಾಗುತ್ತದೆ ಎಂದು ಜನರನ್ನು ನಂಬಿಸಿ ಮೋಸ ಮಾಡುತ್ತಿದ್ದ ಈ ಗ್ಯಾಂಗ್ಅನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಾದ ಬಿ ದೇವೇಂದರ್, ಟಿ ಜಾನ್, ಪ್ರೇಮ್ ಚಂದ್ ಗುಪ್ತಾ ಮತ್ತು ಮೊಹಮ್ಮದ್ ಅಶ್ರಫ್ ಜನರನ್ನು ನಂಬಿಸಿ ಮೋಸ ಮಾಡುತ್ತಿದ್ದರು. ನಾಗಮಣಿ ಮತ್ತು ದುರ್ಗಾದೇವಿ ವಿಗ್ರಹವನ್ನು ಕೋಟಿ ರೂಪಾಯಿಗೆ ಮಾರಾಟ ಮಾಡಿ ಬಂದ ಹಣವನ್ನು ಸಮನಾಗಿ ಹಂಚಿಕೊಳ್ಳುವ ಪ್ಲಾನ್ ಹಾಕಿದ್ದರು.
ಆರೋಪಿಗಳು ಈ ವಸ್ತುಗಳನ್ನು ಮಾರಾಟ ಮಾಡಲು ಯತ್ನಿಸಿದಾಗ ಪೊಲೀಸ್ ಟಾಸ್ಕ್ ಫೋರ್ಸ್ಗೆ ಸಿಕ್ಕಿ ಬಿದ್ದಿದ್ದಾರೆ. ಪೊಲೀಸರು ಆರೋಪಿಗಳನ್ನು ಬಂಧಿಸಿ, ಅವರಿಂದ ಮೂರು ಫೋನ್ ಮತ್ತು ದುರ್ಗಾ ದೇವಿ ವಿಗ್ರಹ ಹಾಗೂ ನಾಗಮಣಿಯನ್ನು ವಶಕ್ಕೆ ಪಡೆದಿದ್ದಾರೆ. ಆದ್ರೆ ಇವು ನಕಲಿ ವಸ್ತುಗಳಾಗಿವೆ.
ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.