ಸಂಗ್ರೂರ್(ಪಂಜಾಬ್): ಲಾಂಗೋವಲ್-ಸಿಡ್ಸಮಾಚಾರ್ ರಸ್ತೆಯಲ್ಲಿ ಮಕ್ಕಳನ್ನು ಕರೆದೊಯ್ಯುತಿದ್ದ ಶಾಲಾ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡು ನಾಲ್ವರು ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ.
ಶಾಲಾ ವ್ಯಾನ್ಗೆ ಬೆಂಕಿ: ನಾಲ್ವರು ಮಕ್ಕಳು ಸಾವು, 8 ವಿದ್ಯಾರ್ಥಿಗಳ ರಕ್ಷಣೆ - ಪಂಜಾಬ್ನಲ್ಲಿ ನಾಲ್ವರು ಮಕ್ಕಳು ಸಾವು
ಖಾಸಗಿ ಶಾಲೆಯ ಮಕ್ಕಳನ್ನು ಕರೆದೊಯ್ಯುತ್ತಿದ್ದ ಮಿನಿ ವ್ಯಾನ್ನಲ್ಲಿ ಬೆಂಕಿ ಕಾಣಿಸಿಕೊಂಡು ನಾಲ್ವರು ಮಕ್ಕಳು ಬಲಿಯಾಗಿದ್ದಾರೆ.
ಶಾಲಾ ವ್ಯಾನ್ಗೆ ಬೆಂಕಿ
ಶಾಲೆ ಮುಗಿದ ನಂತರ ಮಕ್ಕಳನ್ನ ಮನೆಗೆ ಕರೆದುಕೊಂಡು ಹೋಗುವಾಗ ಈ ದುರ್ಘಟನೆ ಸಂಭವಿಸಿದೆ. ವ್ಯಾನ್ನಲ್ಲೆ ನಾಲ್ವರು ಮಕ್ಕಳು ಸಾವನ್ನಪ್ಪಿದ್ದಾರೆ. ಅಲ್ಲೇ ಜಮೀನಿನಲ್ಲಿ ಕೆಲಸ ಮಾಡುತಿದ್ದ ಸ್ಥಳಿಯರು 8 ಮಕ್ಕಳನ್ನ ರಕ್ಷಣೆ ಮಾಡಿದ್ದಾರೆ.
ಸಾವನ್ನಪ್ಪಿದ ನಾಲ್ವರು ಮಕ್ಕಳು 10 ರಿಂದ 12 ವರ್ಷದವರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.