ಬೆಂಗಳೂರು :ಸಂತೋಷ್ ಟ್ರೋಫಿಯಲ್ಲಿ ಕರ್ನಾಟಕ ರಾಜ್ಯವನ್ನು ಉಪಕ್ಯಾಪ್ಟನ್ ಆಗಿ ಪ್ರತಿನಿಧಿಸಿದ್ದ ಫುಟ್ಬಾಲ್ ಆಟಗಾರ ಶ್ರೀ ಟಿ. ಪುಟ್ಟಸಾಮಿ ಅವರು ಇಂದು ತಮ್ಮ ಚಾಮರಾಜ್ಪೇಟೆಯ ನಿವಾಸದಲ್ಲಿ ನಿಧನ ಹೊಂದಿದ್ದಾರೆ.
ತಂಡದವರು ಅವರನ್ನು ಪ್ರೀತಿಯಿಂದ ಪುಟ್ಟ ಎಂದು ಕರೆಯುತ್ತಿದ್ದರು. 79ನೇ ವಯಸ್ಸಿನ ಟಿ. ಪುಟ್ಟಸಾಮಿ ಅವರು ಶನಿವಾರ ಚಾಮರಾಜ್‌ಪೇಟೆಯಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.
ಇವರು ಬಿಡಿಎಫ್‌ಎ ಸದಸ್ಯರಾಗಿ ಮತ್ತು ಕೆಎಸ್‌ಎಫ್‌ಎ ಆಡಳಿತ ಮಂಡಳಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದ ನ್ಯಾಚುರಲ್ ಟರ್ಫ್ ಮೈದಾನದ ಮೇಲ್ವಿಚಾರಕರಾಗಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಜುಲೈ 18, 2020 ರಂದು ರಾಜ್ಯದ ಉನ್ನತ ಫುಟ್ಬಾಲ್ ಆಟಗಾರರಾದ ಶ್ರೀ ಟಿ. ಪುಟ್ಟಸ್ವಾಮಿ ಅವರು ನಿಧನ ಹೊಂದಿದ್ದಾರೆ ಎಂದು ಕರ್ನಾಟಕ ರಾಜ್ಯ ಫುಟ್ಬಾಲ್ ಸಂಘವು ಹೇಳಿದೆ.