ಕರ್ನಾಟಕ

karnataka

ETV Bharat / bharat

ಪಾಕ್​ನಲ್ಲಿ ಕೊರೊನಾ ಸೋಂಕಿಗೆ ಮತ್ತೊಬ್ಬ ಕ್ರಿಕೆಟರ್​ ಬಲಿ - ರಿಯಾಜ್​ ಶೇಖ್​

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ರಶೀದ್ ಲತೀಫ್ ಈ ಸುದ್ದಿಯನ್ನು ಟ್ವಿಟ್ಟರ್​​​ನಲ್ಲಿ ದೃಢಪಡಿಸಿದ್ದು, ಶೇಖ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬೇಡಿಕೊಳ್ಳುವಂತೆ ಟ್ವಿಟ್ಟರ್​ನಲ್ಲಿ ಮನವಿ ಮಾಡಿದ್ದಾರೆ.

Riaz Sheikh
ರಿಯಾಜ್​ ಶೇಖ್

By

Published : Jun 3, 2020, 8:33 AM IST

ಲಾಹೋರ್(ಪಾಕಿಸ್ತಾನ) : ಕೊರೊನಾ ಸೋಂಕಿನಿಂದ ಪಾಕಿಸ್ತಾನದ ಮಾಜಿ ಪ್ರಥಮ ದರ್ಜೆ ಕ್ರಿಕೆಟಿಗ ರಿಯಾಜ್​ ಶೇಖ್ (51)​ ಮೃತಪಟ್ಟಿದ್ದಾರೆ. ಈ ಮೂಲಕ ಪಾಕ್​ನಲ್ಲಿ ಕೊರೊನಾ ವೈರಸ್​ಗೆ ಎರಡನೇ ಕ್ರಿಕೆಟರ್​ ಬಲಿಯಾಗಿದ್ದಾರೆ.

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ರಶೀದ್ ಲತೀಫ್ ಈ ಸುದ್ದಿಯನ್ನು ಟ್ವಿಟ್ಟರ್​​​ನಲ್ಲಿ ದೃಢಪಡಿಸಿದ್ದು, ಶೇಖ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬೇಡಿಕೊಳ್ಳುವಂತೆ ಟ್ವಿಟ್ಟರ್​ನಲ್ಲಿ ಮನವಿ ಮಾಡಿದ್ದಾರೆ.

ಶೇಖ್ 1987ರಲ್ಲಿ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದು, 2005ರ ತನಕ 43 ಪ್ರಥಮ ದರ್ಜೆ ಪಂದ್ಯಗಳು ಮತ್ತು 25 ಲಿಸ್ಟ್​-ಎ ಪಂದ್ಯಗಳನ್ನು ಆಡಿದ್ದಾರೆ. ನಂತರ ಮೊಯಿನ್ ಖಾನ್ ಕ್ರಿಕೆಟ್ ಅಕಾಡೆಮಿಯಲ್ಲಿ ಮುಖ್ಯ ತರಬೇತುದಾರರಾಗಿಯೂ ಕೆಲಸ ಮಾಡುತ್ತಿದ್ದರು.

ಇದಕ್ಕೂ ಮೊದಲು ಪಾಕ್​ನ ಮತ್ತೊಬ್ಬ ಕ್ರಿಕೆಟಿಗ ಜಾಫರ್ ಸರ್ಫರಾಜ್ ಏಪ್ರಿಲ್‌ನಲ್ಲಿ ಕೊರೊನಾ ಸೋಂಕಿಗೆ ಪ್ರಾಣ ಕಳೆದುಕೊಂಡಿದ್ದರು. ಈಗ ಸದ್ಯಕ್ಕೆ ಪಾಕಿಸ್ತಾನದಲ್ಲಿ ಒಟ್ಟು 76,106 ಸೋಂಕಿತರು ಪತ್ತೆಯಾಗಿದ್ದು, 1,599 ಮಂದಿ ಸಾವನ್ನಪ್ಪಿದ್ದಾರೆ. 27,110 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

ABOUT THE AUTHOR

...view details