ಕರ್ನಾಟಕ

karnataka

ನಿವೃತ್ತ ಮುಖ್ಯ ಚುನಾವಣಾ ಆಯುಕ್ತ ಟಿ ಎನ್​ ಶೇಷನ್ ವಿಧಿವಶ

By

Published : Nov 11, 2019, 1:04 AM IST

Updated : Nov 11, 2019, 6:19 AM IST

ದೇಶದಲ್ಲಿ ಪ್ರಮುಖ ಚುನಾವಣಾ ಸುಧಾರಣೆಗಳನ್ನು ತರುವಲ್ಲಿ ಪ್ರಮುಖ ಪಾತ್ರ ವಹಿಸಿದ ನಿವೃತ್ತ ಮುಖ್ಯ ಚುನಾವಣಾ ಆಯುಕ್ತ ಟಿ ಎನ್​ ಶೇಷನ್, ಭಾನುವಾರ ರಾತ್ರಿ ತಮ್ಮ ಚೆನ್ನೈನ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

ಟಿ ಎನ್​ ಶೇಷನ್ ವಿಧಿವಶ

ಚೆನ್ನೈ:ನಿವೃತ್ತ ಮುಖ್ಯ ಚುನಾವಣಾ ಆಯುಕ್ತ ತಿರುನೆಲ್ಲೈ ನಾರಾಯಣ ಅಯ್ಯರ್​ ಶೇಷನ್​, ಭಾನುವಾರ ರಾತ್ರಿ ತಮ್ಮ ಚೆನ್ನೈನ ನಿವಾಸದಲ್ಲಿ ನಿಧನರಾಗಿದ್ದಾರೆ.

ದೇಶದಲ್ಲಿ ಹಲವಾರು ಚುನಾವಣಾ ಸುಧಾರಣೆಗಳನ್ನು ತಂದಿರುವ ಶೇಷನ್​, 10ನೇ ಮುಖ್ಯ ಚುನಾವಣಾ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು. ಡಿಸೆಂಬರ್​ 12, 1990 ರಿಂದ ಡಿಸೆಂಬರ್​ 11, 1996 ವರೆಗೆ ಕರ್ತವ್ಯ ನಿರ್ವಹಿಸಿದ್ದರು.

ಇವರಿಗೆ 87 ವರ್ಷ ವಯಸ್ಸಾಗಿತ್ತು. ಕೇರಳದ ತಿರುನಲ್ಲೈನಲ್ಲಿ ಜನಿಸಿದ ಇವರು, ದೇಶದಲ್ಲಿ ಪ್ರಮುಖ ಚುನಾವಣಾ ಸುಧಾರಣೆಗಳನ್ನು ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಶೇಷನ್ ನಿಧನಕ್ಕೆ ಮಾಜಿ ಮುಖ್ಯ ಚುನಾವಣಾ ಆಯುಕ್ತ ಡಾ. ಎಸ್​ ವೈ ಖುರೈಶಿ, ಪ್ರಧಾನಿ ನರೇಂದ್ರ ಮೋದಿ, ಸಂಸದ ಶಶಿ ತರೂರ್​ ಮೊದಲಾದವರು ಸಂತಾಪ ಸೂಚಿಸಿದ್ದಾರೆ.

Last Updated : Nov 11, 2019, 6:19 AM IST

ABOUT THE AUTHOR

...view details