ನವದೆಹಲಿ: ಶ್ವಾಸಕೋಶದ ಸೋಂಕಿನ ಚಿಕಿತ್ಸೆ ಫಲಿಸದೇ ಸೋಮವಾರ ಸಂಜೆ ಆರ್ಮಿ ಆಸ್ಪತ್ರೆಯಲ್ಲಿ ನಿಧನರಾದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ (84) ನಿಧನಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸಂತಾಪ ಸೂಚಿಸಿದ್ದಾರೆ.
ಮುಖರ್ಜಿ ದಶಕದಿಂದ ನನ್ನ ತಂದೆಯ ಸ್ಥಾನದಲ್ಲಿದ್ದರು: ಮಮತಾ ಬ್ಯಾನರ್ಜಿ ಭಾವನಾತ್ಮಕ ಸಂತಾಪ
ನಾನು ಇದನ್ನು ದುಃಖತಪ್ತವಾಗಿ ಬರೆಯುತ್ತಿದ್ದೇನೆ. ಭಾರತ ರತ್ನ ಪ್ರಣಬ್ ಮುಖರ್ಜಿ ನಮ್ಮನ್ನು ತೊರೆದಿದ್ದಾರೆ. ಒಂದು ಯುಗ ಕೊನೆಗೊಂಡಿದೆ. ದಶಕಗಳಿಂದ ಅವರು ತಂದೆಯ ಸ್ಥಾನದಲ್ಲಿದ್ದರು. ಸಂಸದರಾಗಿ ನನ್ನ ಮೊದಲ ಗೆಲುವಿನಿಂದ ಹಿಡಿದು ನನ್ನ ಹಿರಿಯ ಕ್ಯಾಬಿನೆಟ್ ಸಹೋದ್ಯೋಗಿಯಾಗಿ, ನಾನು ಸಿಎಂ ಆಗುವವರಗೂ ಅನೇಕ ನೆನಪುಗಳನ್ನು ಬಿಟ್ಟು ಹೋಗಿದ್ದಾರೆ. ಪ್ರಣಬ್ ದಾ ಇಲ್ಲದೆ ದೆಹಲಿಗೆ ಭೇಟಿ ನೀಡುವುದು ಊಹಿಸಲಾಗದು ಎಂದು ಸಿಎಂ ಮಮತಾ ಬ್ಯಾನರ್ಜಿ ಭಾವನಾತ್ಮಕವಾಗಿ ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ.
ನಾನು ಇದನ್ನು ದುಃಖತಪ್ತಳಾಗಿ ಬರೆಯುತ್ತಿದ್ದೇನೆ. ಭಾರತ ರತ್ನ ಪ್ರಣಬ್ ಮುಖರ್ಜಿ ನಮ್ಮನ್ನು ತೊರೆದಿದ್ದಾರೆ. ಒಂದು ಯುಗ ಕೊನೆಗೊಂಡಿದೆ. ದಶಕಗಳಿಂದ ಅವರು ತಂದೆಯ ಸ್ಥಾನದಲ್ಲಿದ್ದರು. ಸಂಸದರಾಗಿ ನನ್ನ ಮೊದಲ ಗೆಲುವಿನಿಂದ ಹಿಡಿದು ನನ್ನ ಹಿರಿಯ ಕ್ಯಾಬಿನೆಟ್ ಸಹೋದ್ಯೋಗಿಯಾಗಿ, ನಾನು ಸಿಎಂ ಆಗುವವರಗೂ ಅನೇಕ ನೆನಪುಗಳನ್ನು ಬಿಟ್ಟು ಹೋಗಿದ್ದಾರೆ. ಪ್ರಣಬ್ ದಾ ಇಲ್ಲದೆ ದೆಹಲಿಗೆ ಭೇಟಿ ನೀಡುವುದು ಊಹಿಸಲಾಗದು. ರಾಜಕೀಯದಿಂದ ಅರ್ಥಶಾಸ್ತ್ರದವರೆಗಿನ ಎಲ್ಲ ವಿಷಯಗಳಲ್ಲೂ ಅವರು ದಂತಕಥೆ. ನಾವು ಅವರಿಗೆ ಚಿರಋಣಿಯಾಗಿ ಕೃತಜ್ಞರಾಗಿರಬೇಕು. ನಾನು ಅವರನ್ನು ತುಂಬ ಮಿಸ್ ಮಾಡಿಕೊಳ್ಳುತ್ತೇನೆ, ಅವರ ಮಕ್ಕಳಾದ ಅಭಿಜಿತ್ ಮತ್ತು ಶರ್ಮಿಷ್ಟಾ ಅವರಿಗೆ ನನ್ನ ಸಂತಾಪ ಎಂದು ಸಿಎಂ ಮಮತಾ ಬ್ಯಾನರ್ಜಿ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
ಮುಖರ್ಜಿ ಅವರ ನಿಧನಕ್ಕೆ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸಂತಾಪ ಸೂಚಿಸಿದ್ದು, ಭಾರತ ಮಾತೆ ತನ್ನ 'ಸದ್ಗುಣಶೀಲ ಮತ್ತು ಶ್ರದ್ಧಾಭಕ್ತಿಯ ಮಗನನ್ನು' ಕಳೆದುಕೊಂಡಿದ್ದಾಳೆ ಎಂದು ಶೋಕ ವ್ಯಕ್ತಪಡಿಸಿದ್ದಾರೆ.