ಲಖನೌ (ಉತ್ತರ ಪ್ರದೇಶ): ಇದೇ ಮೊದಲ ಬಾರಿಗೆ ಎಮ್ಎಲ್ಸಿ ಒಬ್ಬರಿಗೆ ಸರ್ಕಾರಿ ಬಂಗಲೆ ನೀಡಲಾಗಿದ್ದು, ಎಮ್ಎಲ್ಸಿ ಅರವಿಂದ್ ಕುಮಾರ್ ಶರ್ಮಾ ಅವರಿಗೆ ಎಸ್ಟೇಟ್ ಇಲಾಖೆಯಿಂದ ದಲಿಬಾಗ್ ಕಾಲೋನಿಯಲ್ಲಿ ಬಂಗಲೆ ಮಂಜೂರು ಮಾಡಲಾಗಿದೆ.
ಸರ್ಕಾರಿ ವಕ್ತಾರರು ಎಸ್ಟೇಟ್ ಇಲಾಖೆಯಿಂದ ಶರ್ಮಾಗೆ ಬಂಗಲೆ ಹಂಚಿಕೆಯಾಗಿರುವುದಾಗಿ ತಿಳಿಸಿದ್ದಾರೆ. ಶರ್ಮಾ ಅವರಿಗೆ ಬಂಗಲೆ ನೀಡಲಾಗುತ್ತಿರುವುದರಿಂದ, ಶೀಘ್ರದಲ್ಲೇ ಅವರಿಗೆ ಮಂತ್ರಿ ಸ್ಥಾನ ನೀಡಲಾಗುವುದು ಎಂಬುವುದು ಖಚಿತವಾಗಿದೆ.
ಮಂತ್ರಿಗಳು, ಎಮ್ಎಲ್ಎಗಳು ಮತ್ತು ಎಮ್ಎಲ್ಸಿಗಳಿಗೆ ಬಂಗಲೆಗಳನ್ನು ಹಂಚಿಕೆ ಮಾಡುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಂಸದೀಯ ವ್ಯವಹಾರಗಳ ಸಚಿವ ಸುರೇಶ್ ಖನ್ನಾ ನೇತೃತ್ವದ ಸಮಿತಿಯನ್ನು ರಚಿಸಿದ್ದರು.
ಭಾರತೀಯ ಜನತಾ ಪಕ್ಷಕ್ಕೆ ಸೇರಲು ಎಂಎಸ್ಎಂಇ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಶರ್ಮಾ, ಗುಜರಾತ್ ಮತ್ತು ದೆಹಲಿಯಲ್ಲಿ ಸುಮಾರು 20 ವರ್ಷಗಳ ಕಾಲ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕೆಲಸ ಮಾಡಿದ್ದರು. ಹೀಗಾಗಿ ಅವರಿಗೆ ರಾಜ್ಯ ಕ್ಯಾಬಿನೆಟ್ನಲ್ಲಿ ಮಂತ್ರಿ ಸ್ಥಾನ ಸಿಗಲಿದೆ ಎಂದು ಹೇಳಲಾಗುತ್ತಿದೆ.