ಕರ್ನಾಟಕ

karnataka

By

Published : Jul 29, 2020, 1:00 PM IST

ETV Bharat / bharat

ಐದು ರಫೇಲ್ ಯುದ್ಧ ವಿಮಾನ‌ಗಳ ಲ್ಯಾಂಡಿಂಗ್​ಗೆ ಕ್ಷಣಗಣನೆ!

ಒಟ್ಟು 36 ರಫೇಲ್ ಯುದ್ಧ ವಿಮಾನಗಳಲ್ಲಿ, ಮೊದಲ ಬ್ಯಾಚ್​ನ ಐದು ರಫೇಲ್‌ ಯುದ್ಧವಿಮಾನಗಳು ಇಂದು ಮಧ್ಯಾಹ್ನ ಹರಿಯಾಣದ ಅಂಬಾಲಾ ವಾಯುನೆಲೆಗೆ ಬಂದಿಳಿಯಲಿವೆ. ಇದರ ಲ್ಯಾಂಡಿಂಗ್​ಗಾಗಿ ಸ್ಕ್ವಾಡ್ರನ್ ಸಿದ್ಧವಾಗಿದೆ.

Rafales
ರಫೇಲ್

ಅಂಬಾಲಾ (ಹರಿಯಾಣ):ಫ್ರಾನ್ಸ್​ನಿಂದ ಹೊಸದಾಗಿ ಬರುತ್ತಿರುವ ಮೊದಲ ಬ್ಯಾಚ್​ನ 5 ರಫೇಲ್ ಯುದ್ಧ ವಿಮಾನಗಳು ಬುಧವಾರ ಮಧ್ಯಾಹ್ನ ಇಲ್ಲಿನ ಅಂಬಾಲಾ ವಾಯುನೆಲೆಗೆ ಬಂದಿಳಿಯಲಿವೆ.

ಇದಕ್ಕಾಗಿ ರಫೇಲ್ ಯುದ್ಧವಿಮಾನಗಳ ಸ್ಕ್ವಾಡ್ರನ್(ಅಂದಾಜು 12 ರಿಂದ 24 ಯುದ್ಧ ವಿಮಾನಗಳನ್ನು ಹೊರಬಲ್ಲ ಘಟಕ), ಹರಿಯಾಣದ ಅಂಬಾಲಾ ವಾಯುನೆಲೆಯಲ್ಲಿ ಬಂದು ನಿಲ್ಲಲು ಸಿದ್ಧವಾಗಿದೆ.

ಜೆಟ್‌ಗಳು ಸೋಮವಾರ ಫ್ರಾನ್ಸ್​ನ ಬಂದರು ನಗರವಾದ ಬೋರ್ಡೆಕ್ಸ್‌ನ ಮೆರಿಗ್ನಾಕ್ ಏರ್‌ಬೇಸ್‌ನಿಂದ ಹೊರಟಿವೆ. ಸುಮಾರು 7,000 ಕಿ.ಮೀ ದೂರವನ್ನು ಕ್ರಮಿಸಿರುವ ವಿಮಾನಗಳು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಮಾತ್ರವೇ ನಿಲುಗಡೆಯಾಗಿತ್ತು. ಅಲ್ಲಿಂದ ನೇರವಾಗಿ ಹರಿಯಾಣದ ಅಂಬಾಲ ವಾಯುನೆಲೆಗೆ ಬರುತ್ತಿವೆ.

ಐದು ರಫೇಲ್​ ಯುದ್ಧವಿಮಾನಗಳಲ್ಲಿ ಮೂರು ವಿಮಾನಗಳು ಏಕ ಆಸನ ಮತ್ತು ಎರಡು ವಿಮಾನಗಳಲ್ಲಿ ಎರಡು ಆಸನಗಳಿವೆ.

ಮೊದಲ ರಫೇಲ್ ಸ್ಕ್ವಾಡ್ರನ್ ನಿಯೋಜನೆಗಾಗಿ ಅಂಬಾಲಾ ವಾಯುನೆಲೆಯಲ್ಲಿ ಭಾರತೀಯ ವಾಯುಸೇನೆ ಪ್ರಮುಖ ಮೂಲಸೌಕರ್ಯ ನವೀಕರಣಗಳನ್ನು ಕೈಗೊಂಡಿದೆ.

ಸುಮಾರು ನಾಲ್ಕು ವರ್ಷಗಳ ಹಿಂದೆ, ಭಾರತೀಯ ವಾಯುಸೇನೆಯ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸಲು, ಭಾರತವು 59,000 ಕೋಟಿ ರೂ.ಗಳ ಒಪ್ಪಂದದಡಿ 36 ರಾಫೆಲ್ ಯುದ್ಧ ವಿಮಾನಗಳನ್ನು ಖರೀದಿಸಲು ಫ್ರಾನ್ಸ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತ್ತು.

ABOUT THE AUTHOR

...view details