ಅಂಬಾಲಾ (ಹರಿಯಾಣ): ಬಹುನಿರೀಕ್ಷಿತ ಫ್ರಾನ್ಸ್ ನಿರ್ಮಿತ ರಫೇಲ್ ಯುದ್ಧ ವಿಮಾನಗಳ ಪೈಕಿ ಮೊದಲ ಹಂತದಲ್ಲಿ ಐದು ವಿಮಾನಗಳು ಇಂದು ಅಂಬಾಲಾಕ್ಕೆ ಆಗಮಿಸಲಿದ್ದು, ಭಾರತೀಯ ವಾಯುಪಡೆಗೆ ಸೇರಿಕೊಳ್ಳಲಿವೆ.
ಇಂದು ಭಾರತದ ಬತ್ತಳಿಕೆಗೆ ಸೇರಲಿವೆ ಫ್ರಾನ್ಸ್ ನಿರ್ಮಿತ 5 ರಫೇಲ್ ಯುದ್ಧ ವಿಮಾನ - Indian Air Force
ಈ ಐದು ರಫೇಲ್ ಜೆಟ್‌ಗಳು ಸೋಮವಾರ ಫ್ರಾನ್ಸ್‌ನಿಂದ ಹೊರಟ್ಟಿದ್ದವು. ಇನ್ನು ಹಾರಾಟದ ನಡುವೆಯೇ ವಿಮಾನಗಳಿಗೆ ಇಂಧನ ಭರ್ತಿಗೊಳಿಸಲಾಗಿದೆ. ಆ ಫೊಟೋಗಳನ್ನು ಅಧೀಕೃತ ಟ್ವೀಟರ್ನಲ್ಲಿ ಹಂಚಿಕೊಳ್ಳಲಾಗಿದೆ.
ಫ್ರಾನ್ಸ್‌ನಿಂದ ಬರುತ್ತಿರುವ ಈ ಐದು ರಫೇಲ್ ಯುದ್ಧ ವಿಮಾನಗಳ ಸ್ವಾಗತಕ್ಕೆ ವಾಯುಪಡೆಯ ಮುಖ್ಯಸ್ಥ ಮಾರ್ಷಲ್ ಆರ್ಕೆಎಸ್ ಭದೌರಿಯಾ, ಅಂಬಾಲಾಗೆ ಭೇಟಿ ನೀಡಲಿದ್ದಾರೆ. ಈ ಯುದ್ಧ ವಿಮಾನಗಳು ಯುಎಇ ಯಿಂದ ಬೆಳಗ್ಗೆ 11 ಗಂಟೆಗೆ ಹೊರಟು ಮಧ್ಯಾಹ್ನ 2 ರ ಹೊತ್ತಿಗೆ ಅಂಬಾಲಾ ತಲುಪಲಿವೆ ಎಂದು ಮೂಲಗಳು ತಿಳಿಸಿವೆ. ಇನ್ನು ಆಂಬಾಲಾದಲ್ಲಿ ಏನಾದರೂ ಹವಾಮಾನ ಸಮಸ್ಯೆ ಕಂಡು ಬಂದರೆ ಪರ್ಯಾಯವಾಗಿ ಜೋಧಪುರ ವಾಯುನೆಲೆಯನ್ನು ಕೂಡ ಸಜ್ಜುಗೊಳಿಸಲಾಗಿದೆ.
ಈ ಜೆಟ್‌ಗಳು ಇಳಿಯುವುದನ್ನು ಗಮನದಲ್ಲಿಟ್ಟುಕೊಂಡು, ಅಂಬಾಲಾ ವಾಯುನೆಲೆಗೆ ಹತ್ತಿರವಿರುವ ನಾಲ್ಕು ಗ್ರಾಮಗಳಲ್ಲಿ ಸೆಕ್ಷನ್ 144 ಅನ್ನು ಜಾರಿಗೆ ತರಲಾಗಿದೆ. ಈ ಬಗ್ಗೆ ಅಂಬಾಲಾದ ಡಿಎಸ್ಪಿ ಮುನೀಶ್ ಸೆಹಗಲ್ ಮಾತನಾಡಿ, ಈ ಬಗ್ಗೆ ಹೆಚ್ಚಿನ ಎಚ್ಚರಿಕಾ ಕ್ರಮಗಳನ್ನ ತೆಗೆದುಕೊಳ್ಳಲಾಗಿದೆ.ಲ್ಯಾಂಡಿಂಗ್ ಸಮಯದಲ್ಲಿ ಜನರು ಛಾವಣಿ ಮೇಲೆ ಏರುವುದು ಹಾಗೂ ಫೋಟೋ ತೆಗೆದುಕೊಳ್ಳುವುದು, ಗುಂಪಾಗಿ ಸೇರುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಧುಲ್ಕೋಟ್, ಬಲದೇವ್ ನಗರ, ಗಾರ್ನಾಲಾ ಮತ್ತು ಪಂಜೋಖರ ಮುಂತಾದ ಸ್ಥಳಗಳಿಂದ ಜನರು ಫೋಟೋ ತೆಗೆದುಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.